ETV Bharat / state

ಕೆಆರ್​ಪಿಪಿ ಸೇರಿ ಪಕ್ಷಾಂತರ ಕಾಯ್ದೆ ಉಲ್ಲಂಘನೆ: ಲಿಂಗಸೂಗೂರು ಪುರಸಭೆಯ ನಾಲ್ವರು ಸದಸ್ಯರ ಸದಸ್ಯತ್ವ ಅನರ್ಹ - ಕೆಆರ್​ಪಿಪಿ ಸೇರಿ ಪಕ್ಷಾಂತರ ಕಾಯ್ದೆ ಉಲ್ಲಂಘನೆ

ಪಕ್ಷಾಂತರ ಕಾಯ್ದೆ ಉಲ್ಲಂಘನೆ ಪ್ರಕರಣ ಸಂಬಂಧ ಲಿಂಗಸೂಗೂರು ಪುರಸಭೆಯ ನಾಲ್ವರ ಸದಸ್ಯತ್ವವನ್ನು ಅನರ್ಹಗೊಳಿಸಿ ಡಿಸಿ ಆದೇಶಿಸಿದ್ದಾರೆ.

ಲಿಂಗಸೂಗೂರು ಪುರಸಭೆಯ ನಾಲ್ವರು ಸದಸ್ಯರ ಸದಸ್ಯತ್ವ ಅನರ್ಹ
ಲಿಂಗಸೂಗೂರು ಪುರಸಭೆಯ ನಾಲ್ವರು ಸದಸ್ಯರ ಸದಸ್ಯತ್ವ ಅನರ್ಹ
author img

By ETV Bharat Karnataka Team

Published : Sep 5, 2023, 11:20 AM IST

ರಾಯಚೂರು: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕಾಂಗ್ರೆಸ್​​ನಿಂದ ಆಯ್ಕೆಯಾದ ನಾಲ್ವರು ಪುರಸಭೆ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಆದೇಶ ಹೊರಡಿಸಿದ್ದಾರೆ.

ರಾಯಚೂರು ಜಿಲ್ಲೆಯ ಲಿಂಗಸೂಗೂರು ಪುರಸಭೆಯ ಸದಸ್ಯರಾದ ಫಾತಿಮಾ ಮೌಲಾಸಾಬ್, ಮೌಲಾಸಾಬ್ ಚೋಟುಸಾಬ್ ಗೌಳಿ, ಎ.ಪ್ರಮೋದ್‌ಕುಮಾರ ಮತ್ತು ಶರಣಪ್ಪ ಬಸಪ್ಪ ಕೆಂಗೇರಿ ಅವರನ್ನು ಡಿಸಿ ಅನರ್ಹಗೊಳಿಸಿದ್ದಾರೆ.

ಕೆಆರ್​ಪಿಪಿ ಸೇರಿ ಪಕ್ಷಾಂತರ ಕಾಯ್ದೆ ಉಲ್ಲಂಘನೆ: ಲಿಂಗಸೂಗೂರು ಪುರಸಭೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಈ ನಾಲ್ವರು ಜಯ ಗಳಿಸಿದ್ದರು. ಆದರೆ ಕೆಲ ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ನಾಲ್ವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(KRPP) ಸೇರುವ ಮೂಲಕ ಪಕ್ಷಾಂತರ ಕಾಯಿದೆ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತಾಗಿ ಲಿಂಗಸೂಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ 2023ರ ಜೂನ್ 2ರಂದು ನಾಲ್ವರು ಸದಸ್ಯರ ವಿರುದ್ಧ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ಈ ದೂರಿನ ಹಿನ್ನೆಲೆಯಲ್ಲಿ ನಾಲ್ವರು ಸದಸ್ಯರಿಗೆ ಡಿಸಿ ನೋಟಿಸ್ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ-ಪ್ರತಿವಾದವನ್ನು ಜಿಲ್ಲಾಧಿಕಾರಿ ಕೋರ್ಟ್‌ನಲ್ಲಿ ಆಲಿಸಲಾಯಿತು. ಆದರೆ ಪಕ್ಷಾಂತರ ಕಾಯ್ದೆ ಆರೋಪಕ್ಕೆ ವಿರುದ್ಧವಾಗಿ ಸೂಕ್ತವಾದ ಸಮರ್ಥನೆಯನ್ನು ನೀಡುವಲ್ಲಿ ಸದಸ್ಯರು ವಿಫಲವಾಗಿದ್ದರು. ಇತ್ತ ದೂರುದಾರರು ಸೂಕ್ತ ದಾಖಲೆಗಳನ್ನು ಸಲ್ಲಿಸಿದ್ದರಿಂದ ಆರೋಪ ಸಾಬೀತಾಗಿದೆ.

ವಾದ-ಪ್ರತಿವಾದವನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಕರ್ನಾಟಕ ಸ್ಥಳೀಯ ಪ್ರಾಧಿಕಾರಿಗಳ(ಪಕ್ಷಾಂತರ ನಿಷೇಧ) ಕಾಯ್ದೆ 1987ರ ಅಡಿಯಲ್ಲಿ ಲಿಂಗಸೂಗೂರು ಪುರಸಭೆಯ ನಾಲ್ವರ ಸದಸ್ಯರ ಬಾಕಿ ಉಳಿದ ಅವಧಿಯ ಸದಸ್ಯತ್ವ ಸ್ಥಾನವನ್ನು ಅನರ್ಹಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಸಂಸದ ಸ್ಥಾನದಿಂದ ಪ್ರಜ್ವಲ್​ ರೇವಣ್ಣ ಅನರ್ಹ: ಹೈಕೋರ್ಟ್‌ ಆದೇಶದ ಪ್ರಮುಖ ಅಂಶಗಳು..

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.