ETV Bharat / state

ಪೊಲೀಸರಿಂದ ವಕೀಲನಿಗೆ ಥಳಿತ ಆರೋಪ... ಕ್ರಮಕ್ಕೆ ಸಚಿವರಿಗೆ ಮನವಿ ನೀಡಿದ ವಕೀಲರು - ಪಿಎಸ್‌ಐ

ಈ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ನ್ಯಾಯವಾದಿಗಳು, ಐಪಿಎಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವ ವೆಂಕಟ‌ರಾವ್ ನಾಡಗೌಡರಿಗೆ ಮನವಿ ಸಲ್ಲಿಸಿದ್ದಾರೆ.

ವಕೀಲನಿಗೆ ಕಿರುಕುಳ ಆರೋಪ
author img

By

Published : Apr 24, 2019, 9:25 PM IST

ರಾಯಚೂರು: ನಗರದ ಪಶ್ಚಿಮ ಠಾಣೆಯ ಪಿಎಸ್‌ಐ ನನಗೆ ಬೇಡಿ ಹಾಕಿ, ಎಲೆಕ್ಟ್ರಿಕ್​​ ಶಾಕ್ ನೀಡಿದ್ದಾರೆ ಎಂದು ವಕೀಲ ವೀರಯ್ಯ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೀರಯ್ಯ, ನಾನು ರೈಲ್ವೆ ಸ್ಟೇಷನ್ ಸರ್ಕಲ್ ಬಳಿಯ ಹೋಟೆಲ್​ಗೆ ತೆರಳಿದಾಗ, ಪಿಎಸ್‌ಐ ನಾಗರಾಜ ಮೆಕ್ಕಾರವರ ಜೀಪ್‌ನ ಡ್ರೈವರ್ ಪರಿಚಯ ವ್ಯಕ್ತಿಯಾಗಿದ್ದ. ಆತನನ್ನು ಮಾತನಾಡಿಸಲು ಹೋದಾಗ ಹೊಡೆದು ಠಾಣೆಗೆ ಕರೆದುಕೊಂಡು ಹೋಗಿ ಕರೆಂಟ್ ಶಾಕ್ ನೀಡಿ ಬೇಡಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಪೊಲೀಸರಿಂದ ವಕೀಲನಿಗೆ ಕಿರುಕುಳ ಆರೋಪ

ಆಗ ಅಲ್ಲಿಯೇ ಇದ್ದ ನನ್ನ ಸ್ನೇಹಿತನ ಸಹಾಯದಿಂದ ನ್ಯಾಯವಾದಿಗಳಿಗೆ ತಿಳಿಸಿದಾಗ ಅವರು ಅಲ್ಲಿಂದ ನನ್ನನ್ನು ಕರೆದುಕೊಂಡು ಬಂದಿದ್ದಾರೆ. ಕಾರಣ ಇಲ್ಲದೆ ನನ್ನನ್ನು ಹೊಡೆದಿರುವ ಪಿಎಸ್‌ಐ ಅವರನ್ನು ಅಮಾನತು ಮಾಡಬೇಕೆಂದು ವೀರಯ್ಯ ಒತ್ತಾಯಿಸಿದ್ದಾ‌‌ರೆ.

ಸಚಿವರಿಗೆ ಮನವಿ:

ಈ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ನ್ಯಾಯವಾದಿಗಳು, ಐಪಿಎಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವ ವೆಂಕಟ‌ರಾವ್ ನಾಡಗೌಡರಿಗೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬೇಡಿ ಹಾಕಿರುವುದಕ್ಕೆ ಅಸಮಾಧಾನಗೊಂಡು, ಈ ಘಟನೆ ಪರಿಶೀಲಿಸಿ ತಪ್ಪಿತಸ್ಥ ‌ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮ: ಎಸ್ಪಿ

ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಕುರಿತು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಸ್ಪಿ ಡಾ. ಕಿಶೋರ್ ಬಾಬು ತಿಳಿಸಿದ್ದಾರೆ.

Intro:ಪಶ್ಚಿಮ ಠಾಣೆಯ ಪಿಎಸ್‌ಐ ನನಗೆ ಬೇಡಿ ಹಾಕಿ, ಎಲೆಕ್ಟ್ರಾನಿಕ್ ಶಾಕ್ ನೀಡಿದ್ದಾರೆ ಎಂದು ವಕೀಲ ವೀರಯ್ಯ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೀರಯ್ಯ, ನಾನು ರೈಲ್ವೆ ಸ್ಟೇಷನ್ ಸರ್ಕಲ್ ಬಳಿಕ ಹೊಟೇಲ್ ಗೆ ತೆರಳಿದಾಗ, ಪಿಎಸ್‌ಐ ನಾಗರಾಜ ಮೆಕ್ಕಾರವರ ಜೀಪ್‌ನ ಡ್ರೈವರ್ ಪೊಲೀಸ್ ಪರಿಚರ ವ್ಯಕ್ತಿಯಾಗಿದ್ದ. ಆತನನ್ನು ಮಾತನಾಡಿಸಲು ಹೋದಾಗ, ಹೊಡೆದು, ಠಾಣೆ ಕರೆದುಕೊಂಡು ಹೋಗಿ ಹೊಡೆದಿದ್ದರಿಂದ ಗಾಯಗೊಂಡು, ಬಳಿಕ ಕರೆಂಟ್ ಶಾಕ್ ನೀಡಿ ಬೇಡಿ ಹಾಕಿದ್ರೆ. ಆಗ ಅಲ್ಲಿಯೆ ಇದ್ದ ನನ್ನ ಸ್ನೇಹಿತನ ಸಹಾಯದಿಂದ ನ್ಯಾಯವಾದಿಗಳಿಗೆ ತಿಳಿಸಿದಾಗ ಅಲ್ಲಿಂದ ನನಗೆ ಕರೆದುಕೊಂಡು ಬಂದಿದ್ದಾರೆ ಎಂದು, ವಿನಃಹ ಕಾರಣ ನನ್ನ ಹೊಡೆದಿರುವ ಪಿಎಸ್‌ಐವರನ ಅಮಾನತು ಮಾಡಬೇಕೆಂದು ವೀರಯ್ಯ ಒತ್ತಾಯಿಸಿದ್ದಾ‌‌ನೆ. Body:ಸಚಿವರಿಗೆ ಮನವಿ: ಈ ಪ್ರಕರಣವನ್ನ ತೀವ್ರವಾಗಿ ಖಂಡಿಸಿರುವ ನ್ಯಾಯಾವಾದಿಗಳು, ಐಪಿಎಸ್ ವಿರುದ್ದ ಕ್ರಮ ಕೈಗೊಳ್ಳುವಂತೆ ಸಚಿವ ವೆಂಕಟ‌ರಾವ್ ನಾಡಗೌಡರಿಗೆ ನ್ಯಾಯವಾದಿಗಳು ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರ ಬೇಡಿ ಹಾಕಿರುವುದಕ್ಕೆ ಅಸಮಾಧಾನಗೊಂಡು, ಈ ಘಟನೆ ಪರಿಶೀಲಿಸಿ ತಪ್ಪಿತಸ್ಥ ‌ಅಧಿಕಾರ ವಿರುದ್ದ ಈ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.Conclusion:
ಎಸ್ಪಿ ಹೇಳಿಕೆ: ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಕುರಿತು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಸ್ಪಿ ಡಾ.ಕಿಶೋರ್ ಬಾಬು ತಿಳಿಸಿದ್ದಾರೆ.
ಬೈಟ್.೧: ವೀರಯ್ಯ, ನ್ಯಾಯವಾದಿ
ಬೈಟ್. ೨: ವೆಂಕಟರಾವ್ ನಾಡಗೌಡ, ಜಿಲ್ಲಾ ಉಸ್ತುವಾರಿ ಮಂತ್ರಿ
ಬೈಟ್. ೩: ಡಾ.ಕಿಶೋರ್ ಬಾಬು, ಎಸ್ಪಿ, ರಾಯಚೂರು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.