ETV Bharat / state

Lack of buses in Raichur: ತೆಲಂಗಾಣ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಬಸ್​ಗಳ ನಿಯೋಜನೆ.. ರಾಯಚೂರಿನಲ್ಲಿ ಪ್ರಯಾಣಿಕರಿಗೆ ಬಸ್​ ಕೊರತೆ

ತೆಲಂಗಾಣ ಸಿಎಂ ಕಾರ್ಯಕ್ರಮ ಹಿನ್ನೆಲೆಯಲ್ಲಿ ಒಪ್ಪಂದದ ಮೇರೆಗೆ ಬಸ್​ಗಳನ್ನು ಕಳುಹಿಸಿಕೊಟ್ಟಿರುವ ಹಿನ್ನೆಲೆ ರಾಯಚೂರಿನಲ್ಲಿ ಬಸ್​ಗಳ ಅಭಾವ ಉಂಟಾಗಿದೆ.

author img

By

Published : Jun 12, 2023, 5:16 PM IST

Updated : Jun 12, 2023, 7:21 PM IST

Etv Bharatlack-of-buses-for-passengers-in-raichur
Lack of buses in Raichur: ತೆಲಂಗಾಣ ಮುಖ್ಯಮಂತ್ರಿಯ ಕಾರ್ಯಕ್ರಮ - ರಾಯಚೂರುನಲ್ಲಿ ಪ್ರಯಾಣಿಕರಿಗೆ ಬಸ್​ಗಳ​ ಅಭಾವ
ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ ಎಂ. ಎಸ್

ರಾಯಚೂರು: ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಿನ್ನೆಲೆಯಲ್ಲಿ ಸರ್ಕಾರಿ ಬಸ್​ನಲ್ಲಿ ಪ್ರಯಾಣ ಬೆಳೆಸಲು ಮಹಿಳೆಯರು ಮುಗಿ ಬೀಳುತ್ತಿದ್ದಾರೆ. ಮತ್ತೊಂದೆಡೆ ಒಪ್ಪಂದದ ಮೇರೆಗೆ ಕೆಎಸ್​ಆರ್​ಟಿಸಿ ಬಸ್​ಗಳನ್ನು ನೇರೆಯ ರಾಜ್ಯ ತೆಲಂಗಾಣದಲ್ಲಿನ ಕಾರ್ಯಕ್ರಮಕ್ಕಾಗಿ ಕಳುಹಿಸಿಕೊಟ್ಟಿರುವುದರಿಂದ ಪ್ರಯಾಣಿಕರು ಬಸ್​ಗಾಗಿ ಕಾಯುತ್ತಿರುವ ದೃಶ್ಯಗಳು ರಾಯಚೂರಿನಲ್ಲಿ ಕಂಡುಬಂದಿವೆ.

ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಎಂದಿನಂತೆ ಪ್ರಯಾಣಿಕರು ಸರ್ಕಾರ ಬಸ್​ನಲ್ಲಿ ಪ್ರಯಾಣವನ್ನು ಬೆಳೆಸುತ್ತಿದ್ದಾರೆ. ವಿಶೇಷವಾಗಿ ನಿನ್ನೆಯಿಂದ ಉಚಿತ ಬಸ್​ ಪ್ರಯಾಣದ ಶಕ್ತಿ ಯೋಜನೆ ರಾಜ್ಯಾದ್ಯಂತ ಜಾರಿಗೆ ಬಂದಿರುವುದರಿಂದ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಬೆಳೆಸಲು ಮುಂದಾಗುತ್ತಿದ್ದಾರೆ. ಮತ್ತೊಂದೆಡೆ ನೆರೆಯ ರಾಜ್ಯ ತೆಲಂಗಾಣದ ಮುಖ್ಯಮಂತ್ರಿಯ ಕಾರ್ಯಕ್ರಮ ಗದ್ವಾಲ್​ನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ 40ಕ್ಕೂ ಹೆಚ್ಚು ಕೆಎಸ್​ಆರ್​ಟಿಸಿ ಬಸ್​ಗಳನ್ನು ರಾಯಚೂರು ಬಸ್​ ಡಿಪೋದಿಂದ ಒಪ್ಪಂದದ ಮೇರೆಗೆ ಕಳುಹಿಸಿಕೊಡಲಾಗಿದೆ. ಇದರಿಂದಾಗಿ ಪ್ರಯಾಣಿಕರು ಬಸ್​ಗಳಿಲ್ಲದೇ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ.

ಈ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ ಎಂ. ಎಸ್ ಮಾತನಾಡಿ, ಪಕ್ಕದ ರಾಜ್ಯದ ಸಿಎಂ ಕಾರ್ಯಕ್ರಮ ಹಿನ್ನೆಲೆಯಲ್ಲಿ ಒಪ್ಪಂದದ ಮೇರೆಗೆ ಬಸ್​ಗಳನ್ನು ಕಳುಹಿಸಿಕೊಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ಬಸ್​ ವ್ಯತ್ಯಯ ಉಂಟಾಗಿದೆ. ಆದರೆ ರಾಯಚೂರು ಜಿಲ್ಲೆಯಲ್ಲಿ ದಿನನಿತ್ಯದಂತೆ ಸಂಚರಿಸಲು ಅಗತ್ಯವಿರುವ ಬಸ್​ಗಳ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಬಸ್​ಗಳು ಕಡಿಮೆ ಇರುವುದರಿಂದ ಬಸ್ ವ್ಯತ್ಯಯವಾಗಿರಬಹುದು ಎಂದರು.

ಮಹಿಳೆಯರಿಗೆ ಉಚಿತ ಪ್ರಯಾಣದ ಹಿನ್ನಲೆಯಲ್ಲಿ ಬಸ್​ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಬಸ್​ಗಳ ಕೊರತೆಯಾಗುತ್ತಿದ್ದು, ಹೆಚ್ಚು ಬಸ್​ಗಳ ಅವಶ್ಯಕತೆಯಿದೆ. ಈಗ ಒಪ್ಪಂದದ ಮೇರೆಗೆ ಕಳುಹಿಸಿರುವ ಬಸ್​ಗಳು ಕಾರ್ಯಕ್ರಮದಿಂದ ವಾಪಾಸ್ ಆದ ಬಳಿಕ ಎಂದಿನಂತೆ ಕಾರ್ಯಾಚರಣೆ ನಡೆಸುತ್ತವೆ. ಪ್ರಯಾಣಿಕರು ಬಸ್​ ವ್ಯತ್ಯಯದ ಬಗ್ಗೆ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಪ್ರಯಾಣಿಕರಿಗೆ ಈ ಬಗ್ಗೆ ಬಸ್ ನಿಲ್ದಾಣದಲ್ಲಿ ಅನೌನ್ಸ್ ಮಾಡುವ ಮೂಲಕ ಮಾಹಿತಿಯನ್ನು ನೀಡುತ್ತಿದ್ದೇವೆ. ಪ್ರಯಾಣಿಕರಿಂದ ಯಾವುದೇ ದೂರುಗಳು ಬಂದರೆ ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಹಾವೇರಿ : ಸರ್ಕಾರಿ ಬಸ್​​ನಿಂದ ಬಿದ್ದು ಶಾಲಾ ಬಾಲಕಿ ಸಾವು

ಚಿಂಚೋಳಿಯಿಂದ ಕಲಬುರಗಿ ಮಾರ್ಗಕ್ಕೆ ಬೆಳಗ್ಗೆ ಬಸ್ ಸಮಸ್ಯೆ: ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ-ಕಾಲೇಜಿಗೆ ತೆರಳಬೇಕು ಎಂಬ ಒತ್ತಡದಲ್ಲಿರುತ್ತಾರೆ. ಆದರೆ ಚಿಂಚೋಳಿಯಿಂದ ಕಲಬುರಗಿ ಮಾರ್ಗಕ್ಕೆ ಬೆಳಗ್ಗೆ ಬಸ್ ಸಮಸ್ಯೆ ಬಹು ದೊಡ್ಡ‌ ಅನಾನುಕೂಲ ಆಗಿದೆ. ಇದರಿಂದ ಒಂದೇ ಬಸ್​ನಲ್ಲಿ ನೂರಾರು ಪ್ರಯಾಣಿಕರು ಪ್ರಯಾಣಿಸುತ್ತಿರುವ ವಿಡಿಯೋವೊಂದು ಬೆಳಕಿಗೆ ಬಂದಿದೆ. ಇನ್ನು ಶಾಲಾ ಮಕ್ಕಳು ಕಿಕ್ಕಿರಿದು ತುಂಬಿದ ಬಸ್​ನಲ್ಲೇ ಪ್ರಯಾಣಿಸುತ್ತಿದ್ದು, ಬಸ್​ ಹತ್ತುವ ಬಾಗಿಲಿನಲ್ಲಿ ವಿದ್ಯಾರ್ಥಿಗಳು ನೇತಾಡಿಕೊಂಡು ಪ್ರಯಾಣಿಸುವ ಸ್ಥಿತಿ ಬಂದೋದಗಿದೆ.

ಶಾಲಾ ಮಕ್ಕಳಾಗಲಿ ಮತ್ತು ಪ್ರಯಾಣಿಕರಾಗಲಿ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ತಮ್ಮ‌ ಕೆಲಸಕ್ಕೆ ಹಾಜರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಂಚೋಳಿ ಸಾರಿಗೆ ಘಟಕದ ಅಧಿಕಾರಿಗಳು ಬಸ್​ಗಳ ನಿರ್ವಹಣೆ ಮಾಡುವಲ್ಲಿ‌ ವಿಫಲವಾಗುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಪ್ರತಿ 30 ನಿಮಿಷಕ್ಕೆ ಒಂದು ಬಸ್ ಚಿಂಚೋಳಿಯಿಂದ ಕಲಬುರಗಿಗೆ ಓಡಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

Last Updated : Jun 12, 2023, 7:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.