ರಾಯಚೂರು: ಜಿಲ್ಲೆಯಾದ್ಯಂತ ಕನ್ನಡ ರಾಜ್ಯೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ನಗರದ ಜಿಲ್ಲಾ ಪೊಲೀಸ್ ಇಲಾಖೆಯ ಕವಾಯತ್ ಮೈದಾನದಲ್ಲಿ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಷ್ಟ್ರಧ್ವಜಾರೋಹಣ ನೇರವೇರಿಸಿದ್ರು. ಬಳಿಕ ಪೊಲೀಸ್ ಇಲಾಖೆ ಧ್ವಜವಂದನೆ ಸ್ವೀಕರಿಸಿದ್ರು.
ಧ್ವಜವಂದನೆ ಬಳಿಕ ಪೊಲೀಸ್ ಇಲಾಖೆ, ಅಗ್ನಿಶಾಮಕ, ಮಹಿಳಾ ಪೊಲೀಸ್ ಸಿಬ್ಬಂದಿ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳಿಂದ ಆಕರ್ಷಕ ಪಂಥಸಂಚಲ ನಡೆಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಜನಪ್ರತಿನಿಧಿಗಳು ಭಾಗವಹಿಸಬೇಕಾಗಿತ್ತು. ಆದ್ರೆ ಜನಪ್ರತಿನಿಧಿಗಳು ಗೈರು ಹಾಜರಿಯಿಂದ ಕಾಯ್ದಿರಿಸಿದ ಆಸನಗಳಲ್ಲಿ ಖಾಲಿ ಖಾಲಿ ಕಂಡು ಬಂದವು.
ಎರಡು ಜಿಲ್ಲೆಗಳ ಉಸ್ತುವರಿ ಮಂತ್ರಿ ಜವಾಬ್ದಾರಿ ನೀಡಿರುವಯದ್ದರಿಂದ ಸಚಿವ ಹಾಲಪ್ಪ ಆಚಾರ್ ಸಹ ಗೈರು ಹಾಜರಿದ್ದರು. ಇದಕ್ಕೂ ಮೊದಲು ಕರ್ನಾಟಕ ಸಂಘದಲ್ಲಿ ಧ್ವಜಾರೋಹಣಕ್ಕೆ ರಾಯಚೂರು ನಗರ ಮತ್ತು ಗ್ರಾಮಾಂತರ ಶಾಸಕರ ಮಾತ್ರ ಹಾಜರಾಗಿ, ಸಾರ್ವಜನಿಕವಾಗಿ ಆಚರಿಸುವ ಕಾರ್ಯಕ್ರಮದಲ್ಲಿ ಗೈರು ಆಗಿದ್ರು.
ಇನ್ನೂ ಕಾರ್ಯಕ್ರಮದಲ್ಲಿ ವಿಷೇಶವಾಗಿ ಕನ್ನಡದಲ್ಲಿ ಕವಾಯತ್ತು ಸೂಚನೆಗಳನ್ನು ನೀಡಲಾಯಿತು. ಡಿಎಆರ್ ಡಿಎಸ್ಪಿ ಪ್ರಮಾನಂದ ಗೊಡ್ಕೆಯವರು, ಕವಾಯತಿನ ಪ್ರತಿಯೊಂದು ಸೂಚನೆಗಳನ್ನು, ಕನ್ನಡದಲ್ಲಿ ಅನುವಾದ ಮಾಡಿಕೊಂಡು ಸೂಚನೆ ನೀಡಿದರು. ಇದೇ ಮೊದಲ ಬಾರಿಗೆ ಕನ್ನಡದಲ್ಲಿಯೇ ಕವಾಯತ್ತು ಸೂಚನೆ ನೀಡುವುದು ಕಾರ್ಯಕ್ರಮದಲ್ಲಿ ವಿಶೇಷವಾಗಿ ಗಮನ ಸೆಳೆಯಿತು.