ರಾಯಚೂರು : ಮಾಸ್ಕ್ ಹಾಕದೆ ಇರುವ ಕಾರಣ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯ ಕಾರು ಚಾಲಕನಿಗೆ ಪೊಲೀಸರು ದಂಡ ವಿಧಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಕೊರೊನಾ ನಿಯಂತ್ರಣಕ್ಕೆ ವೀಕೆಂಡ್ ಕರ್ಫ್ಯೂ ಜಾರಿ ಇದೆ. ನಗರದ ಚಂದ್ರಮೌಳೇಶ್ವರ ವೃತ್ತದ ಬಳಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿರುವ ವೇಳೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿಪತಿ ಗಾಣದಾಲ ತಮ್ಮ ಚಾಲಕನೊಂದಿಗೆ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದರು.
ಈ ವೇಳೆ ಚಾಲಕ, ಮಾಸ್ಕ್ ಧರಿಸಿರಲಿಲ್ಲ. ಆಗ ಪೊಲೀಸರು 200 ರೂಪಾಯಿ ದಂಡ ವಿಧಿಸಿದ್ದಾರೆ. ಪ್ರೊಬೆಷನರಿ ಪಿಎಸ್‌ಐ ವಿಜಯ ಪ್ರತಾಪ್ ಅವರು ಜೆಡಿಎಸ್ ಮುಖಂಡ ಗಾಣದಾಲ ಮತ್ತು ಅವರ ಚಾಲಕನಿಗೆ ತಲಾ 100 ರೂ. ದಂಡ ವಿಧಿಸಿದ್ದಾರೆ.
ದಂಡ ಭರಿಸಿದ ಜೆಡಿಎಸ್ ಮುಖಂಡ ಮಾಸ್ಕ್ ಇಲ್ಲದ ಕಾರಣ ತಮ್ಮಲ್ಲಿರುವ ಕರವಸ್ತ್ರವನ್ನ ಮುಖಕ್ಕೆ ಧರಿಸಿಕೊಂಡು ಹೋದರು. ಇನ್ನು ಪೊಲೀಸರು ಅನವಶ್ಯಕವಾಗಿ ಓಡಾಟ ಮಾಡುತ್ತಿದ್ದವರಿಗೆ ತಡೆದು ದಂಡ ವಿಧಿಸಿ, ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದಾರೆ.