ETV Bharat / state

ಮಂತ್ರಾಲಯಕ್ಕೆ ಭೇಟಿ ನೀಡಿದ ರಾಜ್ಯಸಭಾ ಸದಸ್ಯ ಜಗ್ಗೇಶ್ - jaggesh visited manthralaya

ರಾಜ್ಯಸಭಾ ನೂತನ ಸದಸ್ಯರಾಗಿ ಆಯ್ಕೆಯಾದ ನಟ ಜಗದೀಶ್ ಪತ್ನಿ ಪರಿಮಳ ಅವರೊಂದಿಗೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಸನ್ನಿಧಾನಕ್ಕೆ ಭೇಟಿ ನೀಡಿದ್ದರು.

jaggesh-and-his-wife-visited-manthralaya
ಮಂತ್ರಾಲಯಕ್ಕೆ ಭೇಟಿ ನೀಡಿದ ರಾಜ್ಯಸಭಾ ಸದಸ್ಯ ಜಗ್ಗೇಶ್
author img

By

Published : Jun 12, 2022, 11:04 PM IST

ರಾಯಚೂರು/ಮಂತ್ರಾಲಯ : ರಾಜ್ಯಸಭೆಯ ನೂತನ ಸದಸ್ಯರಾಗಿ ಆಯ್ಕೆಯಾದ ನಟ ಜಗ್ಗೇಶ ಅವರು ಪತ್ನಿ ಪರಿಮಳ ಅವರೊಂದಿಗೆ ಭಾನುವಾರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದರು. ಶ್ರೀಮಠಕ್ಕೆ ಆಗಮಿಸಿ ಜಗ್ಗೇಶ್​ ಮೊದಲಿಗೆ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ದರ್ಶನ ಪಡೆದುಕೊಂಡು, ವಿಶೇಷ ಪೂಜೆ ನೇರವೇರಿಸಿದರು.

ಇದಾದ ಬಳಿಕ ಮಠದ ಪೀಠಾಧಿಪತಿ‌ ಶ್ರೀಸುಬುದೇಂಧ್ರ ತೀರ್ಥರ‌ ಆಶೀರ್ವಾದ ಪಡೆದುಕೊಂಡು, ಕುಶಲೋಪರಿ ವಿಚಾರಿಸಿದರು. ಈ ವೇಳೆ ಪೀಠಾಧಿಪತಿಗಳು ಸನ್ಮಾನಿಸಿ ಜಗ್ಗೇಶ್ ಅವರಿಗೆ ಆಶೀರ್ವದಿಸಿದರು.

ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಗ್ಗೇಶ್​ ಸ್ಪರ್ಧೆ ಮಾಡಿ, ಜಯ ಗಳಿಸಿದ್ದರು. ನೂತನ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಜಗ್ಗೇಶ್ ಮೊದಲ ಬಾರಿಗೆ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದಾರೆ.

ಓದಿ : ಸುಬ್ರಮಣ್ಯ ಬಳಿ ಚಲಿಸುತ್ತಿದ್ದ ಬಸ್, ಟೆಂಪೋ ಮೇಲೆ ಬಿದ್ದ ಮರಗಳು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.