ETV Bharat / state

ಲಾಕ್​ಡೌನ್ ನಡುವೆ ಅಕ್ರಮ ಮರಳುಗಾರಿಕೆ: ಸರ್ಕಾರದ ಆದೇಶಕ್ಕಿಲ್ಲ ಬೆಲೆ!

ಕೊರೊನಾ ಸೋಂಕಿನ ಭೀತಿಯಿಂದ ಇಡೀ ರಾಜ್ಯವನ್ನೇ ಲಾಕ್​ಡೌನ್ ಮಾಡಿ ಸೋಂಕಿನ ಹತೋಟಿಗೆ ಸರ್ಕಾರ ಮುಂದಾಗಿತ್ತು. ಲಾಕ್​ಡೌನ್​ನಿಂದ ಆರ್ಥಿಕ ನಷ್ಟ ಉಂಟಾಗಿ ಹಲವು ವಲಯಗಳಿಗೆ ಹೊಡೆತ ಕೊಟ್ಟಿದೆ. ಆದ್ರೆ, ರಾಯಚೂರು ಜಿಲ್ಲೆಯಲ್ಲಿ ಹರಿಯುವ ಎರಡು ನದಿಗಳಲ್ಲಿ ಲಾಕ್​ಡೌನ್ ನಡುವೆಯು ಅಕ್ರಮ ಮರಳುಗಾರಿಕೆ ನಡೆದಿದೆ.

author img

By

Published : Jul 26, 2020, 1:39 PM IST

Illegal sanding between lockdown
ಅಕ್ರಮ ಮರಳುಗಾರಿಕೆ

ರಾಯಚೂರು: ಲಾಕ್​ಡೌನ್​ನಿಂದ ಮಾರ್ಚ್ ತಿಂಗಳ ಕೊನೆಯಲ್ಲಿ ಹಾಗೂ ಏಪ್ರಿಲ್, ಮೇ ತಿಂಗಳಲ್ಲಿ ಜಿಲ್ಲೆಯ ಜೀವ ನದಿಗಳಾಗಿರುವ ಕೃಷ್ಣ ಹಾಗೂ ತುಂಗಭದ್ರಾ ನದಿಯಲ್ಲಿ ಮರಳುಗಾರಿಕೆ ಸ್ಥಗಿತಗೊಳಿಸಲಾಗಿತ್ತು. ಆದರೂ ಕೂಡಾ ಕೊರೊನಾ ಲಾಕ್​ಡೌನ್ ಮಧ್ಯೆ ಇಲ್ಲಿ ಎಗ್ಗಿಲ್ಲದೆ ಮರಳುಗಾರಿಕೆ ನಡೆದಿದೆ.

ಜಿಲ್ಲೆಯ ಜೀವ ನದಿಗಳಾಗಿರುವ ಕೃಷ್ಣ, ತುಂಗಭದ್ರಾ ನದಿಗಳು ವಿಶಾಲವಾಗಿ ಹರಿಯುವುದರಿಂದ ಮರಳು ಯಥೇಚ್ಛವಾಗಿ ದೊರೆಯುತ್ತದೆ. ನದಿಯಲ್ಲಿ ಮರಳುಗಾರಿಕೆಯಿಂದ ಸರ್ಕಾರಕ್ಕೆ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ರಾಜಧನ ಸಂಗ್ರಹವಾಗುತ್ತದೆ. ಲಾಕ್​ಡೌನ್​ ಸಂದರ್ಭ ಮರಳುಗಾರಿಕೆಯನ್ನು ಸ್ಥಗಿತಗೊಳಿಸಿದ್ದರೂ, ಈ ಎರಡು ನದಿಗಳಲ್ಲಿ ಅಕ್ರಮ ಮರಳುಗಾರಿಕೆ ನಡೆದಿದೆ.

ಕೃಷ್ಣ, ತುಂಗಭದ್ರಾ ನದಿಗಳಿಗೆ ಒಟ್ಟು 38 ಬ್ಲಾಕ್​ಗಳನ್ನ ಗುರುತಿಸಲಾಗಿದೆ. ಇದರಲ್ಲಿ 27 ಬ್ಲಾಕ್​ಗಳಲ್ಲಿ ಮರಳುಗಾರಿಕೆಗೆ ಅನುಮತಿ ನೀಡಲಾಗಿದೆ. ನಿಯಮ ಪ್ರಕಾರ ರಾಜಧನ ಪಾವತಿಯಾಗಿ ನಿಗದಿತ ಸಮಯದಲ್ಲಿ ಮರಳುಗಾರಿಕೆ ನಡೆಸಬೇಕು. ಆದ್ರೆ ಮರಳು ಹೇರಳವಾಗಿ ದೊರೆಯುವುದರಿಂದ ಅಕ್ರಮ ಮರಳುಗಾರಿಕೆ ಮಾಡಿ, ಎಗ್ಗಿಲ್ಲದೆ ಮರಳು ಸಾಗಾಣಿಕೆ ಮಾಡುತ್ತಿರುವ ಆರೋಪದ ಮೇಲೆ 2019ರಲ್ಲಿ ಜಿಲ್ಲೆಯಲ್ಲಿ ಒಟ್ಟು 205 ಪ್ರಕರಣಗಳು ದಾಖಲಿಸಲಾಗಿದೆ. ಅಲ್ಲದೆ 464 ಆರೋಪಿಗಳನ್ನ ದಸ್ತಗಿರಿ ಮಾಡಲಾಗಿದೆ. 71 ಲಾರಿ/ಟಿಪ್ಪರ್,159 ಟ್ರಾಕ್ಟರ್, ಕ್ರಷರ್, 4 ಜೆಸಿಬಿ ವಶಕ್ಕೆ ಪಡೆದು 1,05,49,270 ರೂಪಾಯಿ ಮೌಲ್ಯದ ಮರಳನ್ನ ಜಪ್ತಿ ಮಾಡಲಾಗಿತ್ತು.

ಅಕ್ರಮ ಮರಳುಗಾರಿಕೆ ಮೇಲೆ ದಾಳಿ

ಪ್ರಸಕ್ತ 2020ರ ಮಾರ್ಚ್, ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಲ್ಲಿ ಒಟ್ಟು 74 ಪ್ರಕರಣಗಳನ್ನು ದಾಖಲಿಸಿ, 88 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. 17,88,640 ರೂಪಾಯಿ ಮೌಲ್ಯದ ಅಕ್ರಮ ಮರಳನ್ನ ಜಪ್ತಿ ಮಾಡಲಾಗಿದ್ದು, 28 ಲಾರಿ/ಟಿಪ್ಪರ್, 56 ಟ್ರಾಕ್ಟರ್ ವಶಪಡಿಸಿಕೊಳ್ಳಲಾಗಿದೆ.

ಹಗಲು ಹಾಗೂ ರಾತ್ರಿ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿರುವುದನ್ನು ಕೆಲ ಸಂಘಟನೆ ಮುಖಂಡರು ಹಾಗೂ ಸಾರ್ವಜನಿಕರು ವಿಡಿಯೋ ಹಾಗೂ ಪೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿದಬಿಟ್ಟಿದ್ರು. ಇದೀಗ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮರಳುಗಾರಿಕೆ ತಡೆಯಲಾಗಿದೆ. ಇದರ ನಡುವೆ ನಿನ್ನೆ ತಡರಾತ್ರಿ ಮೂರು ಟಿಪ್ಪರ್​ಗಳು ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಹೊಸ ಮರಳು ನೀತಿಯಡಿಯಲ್ಲಿ ಒಂದು ಟಿಪ್ಪರ್​ಗೆ 1.68 ಲಕ್ಷ ರೂಪಾಯಿಯಂತೆ 3 ಟಿಪ್ಪರ್ ಗೆ 5,05,000 ರೂಪಾಯಿ ದಂಡ ವಿಧಿಸಲಾಗಿದೆ.

ಒಟ್ಟಿನಲ್ಲಿ, ಅಕ್ರಮ ಮರಳುಗಾರಿಕೆ ಮೂಲಕ ಜಿಲ್ಲೆಯ ಸಂಪನ್ಮೂಲ ದೋಚಲಾಗುತ್ತಿದ್ದು, ಇದಕ್ಕೆ ಸರ್ಕಾರ ಸಂಪೂರ್ಣ ಕಡಿವಾಣಕ್ಕೆ ಮುಂದಾಗಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.