ETV Bharat / state

ಲಾಕ್​ಡೌನ್​ ನಡುವೆ ಮದ್ಯ ಮಾರಾಟ.. ಕ್ಯಾಮೆರಾ ಕಂಡು ಓಡಿದ ಮದ್ಯಪ್ರಿಯರು..

ಲಾಕ್​ಡೌನ್​, ಮದ್ಯ ಮಾರಾಟ ನಿಷೇಧದ ನಡುವೆಯೂ ಕೆಲವರು ಎಪಿಎಂಸಿ ಆವರಣದಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದಿದೆ..

illegal liquor sale in raichur
ಮದ್ಯಪ್ರಿಯರು
author img

By

Published : May 26, 2021, 2:15 PM IST

ರಾಯಚೂರು : ಕೋವಿಡ್​ ನಿಯಂತ್ರಣಕ್ಕೆ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿದ್ದು, ಮದ್ಯ ಮಾರಾಟ ನಿಷೇಧಿಸಲಾಗಿದೆ. ಆದ್ರೆ, ನಗರದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ.

ಲಾಕ್​ಡೌನ್​ ನಡುವೆ ಮದ್ಯ ಮಾರಾಟ - ಕ್ಯಾಮೆರಾ ಕಂಡು ಓಡಿದ ಮದ್ಯಪ್ರಿಯರು

ನಗರದ ಗಂಜ್ ಸರ್ಕಲ್ ಬಳಿ ಮಹಿಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದ್ದು, ಎಪಿಎಂಸಿಯನ್ನೇ ಮದ್ಯಪ್ರಿಯರು ಅಡ್ಡವನ್ನಾಗಿ ಮಾಡಿಕೊಂಡಿದ್ದಾರೆ. ಮದ್ಯ ಸೇವನೆ ಮಾಡುತ್ತಿರುವ ವಿಷಯದ ಕುರಿತು ಸುದ್ದಿ ಮಾಡಲು ಮಾಧ್ಯಮದವರು ತೆರಳಿದಾಗ, ಮದ್ಯ ಪ್ರಿಯರು ಕ್ಯಾಮೆರಾ ಕಂಡು ಓಡಿ ಹೋಗಿದ್ದಾರೆ. ಎದ್ನೋ ಬಿದ್ನೋ ಎಂದು ಮದ್ಯವನ್ನು ಕೈಯಲ್ಲಿ ಹಿಡಿದು ಓಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಎಪಿಎಂಸಿಯ ಆವರಣದಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದರು. ಕೆಲವರು ಮದ್ಯದ ಆಮಲಿನಲ್ಲಿ ಕುಣಿದು ಕುಪ್ಪಳಿಸಿದರು. ಅಲ್ಲದೇ ಓರ್ವ ಮದ್ಯಪ್ರಿಯ ಲಾಕ್​ಡೌನ್​ನಿಂದ ಕುಡಿಯೋಕೆ ಹಣ ಇಲ್ಲ. ಅಂಗಡಿಗಳನ್ನು ಬಂದ್ ಮಾಡಿಸಿದ್ದೀರಿ. ನಾವು ಏನು ಮಾಡುವುದು ಅಂತ ಮದ್ಯವನ್ನು ಹಿಡಿದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್​.ಎಸ್​.ದೊರೆಸ್ವಾಮಿ ಇನ್ನಿಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.