ರಾಯಚೂರು : ಕೋವಿಡ್ ಕಾರಣದಿಂದ ದೇವಾಲಯಗಳ ಬಾಗಿಲು ಮುಚ್ಚಿದ್ದರೂ, ಕಾರ ಹುಣ್ಣಿಮೆ ದಿನವಾದ ಇಂದು ಭಕ್ತರು ದೇವಾಲಯದ ಗೇಟ್ ಮುಂದೆ ಕಾಯಿ ಒಡೆಯುವ ಮೂಲಕ ಭಕ್ತಿ ಸಮರ್ಪಿಸುತ್ತಿದ್ದ ದೃಶ್ಯ ಕಂಡು ಬಂತು.
ನಗರದ ಶ್ರೀ ಕಂದಗಡ್ಡೆ ಮಾರೆಮ್ಮದೇವಿ ದೇವಾಲಯದ ಮುಂದೆ ಕಾರ ಹುಣ್ಣಿಮೆ ಪ್ರಯುಕ್ತ ಭಕ್ತರು ಪೂಜೆ ಸಲ್ಲಿಸಿದರು. ನೈವೇದ್ಯ ಮಾಡಿ, ತೆಂಗಿನಕಾಯಿ ಒಡೆದು ತಮ್ಮ ಭಕ್ತಿ ಸಮರ್ಪಿಸಿದರು.
ಕೋವಿಡ್ ಮುನ್ನೆಚ್ಚರಿಕ ಕ್ರಮವಾಗಿ ದೇವಾಲಯಗಳನ್ನು ಮುಚ್ಚಲಾಗಿದೆ. ಆದರೆ, ಜನ ಮಾತ್ರ ನಿಯಮಗಳನ್ನು ಗಾಳಿಗೆ ತೂರಿ ಗೇಟ್ ಮುಂದೆ ಗುಂಪು ಗುಂಪಾಗಿ ಸೇರಿದ್ದರು. ಜನ ಜಂಗುಳಿಯ ನಡುವೆ ಸಾಮಾಜಿಕ ಅಂತರ ಮಾಯವಾಗಿತ್ತು.
ಓದಿ : ಲಿಂಗಸುಗೂರು ಬಸ್ ನಿಲ್ದಾಣ ಬಳಿ ವ್ಹೀಲಿಂಗ್ ಮಾಡಿದ ಟಿಪ್ಪರ್! Video