ರಾಯಚೂರು: ದಂಧೆಕೋರರ ಡೈರೆಕ್ಷನ್ ಮೇಲೆ ಸರ್ಕಾರ ತನಿಖೆ ನಡೆಸುತ್ತಿದೆ. ದಂಧೆಕೋರರು ಹೇಳಿದಂತೆ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಯಚೂರು ಜಿಲ್ಲೆಯಲ್ಲಿ ಇಂದಿನಿಂದ 6 ದಿನಗಳ ಕಾಲ ನಡೆಯುವ ಪಂಚರತ್ನ ಯಾತ್ರೆ ಆರಂಭಿಸುವ ಮುನ್ನ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ದಂಧೆಕೋರರು ಹೇಳಿದ ತನಿಖೆ: ಪಿಎಸ್ಐ ಅಕ್ರಮ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೆಚ್ಡಿಕೆ, "ಪಿಎಸ್ಐ ಅಕ್ರಮ ನೇಮಕಾತಿ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ. ಈ ಬಗ್ಗೆ ನಾನು ಮೊದಲೇ ಹೇಳಿದ್ದೇನೆ. ಇವರು ನಿಷ್ಪಕ್ಷಪಾತವಾಗಿ ತನಿಖೆ ಮಾಡುವುದಿಲ್ಲ. ಇದು ತಾರ್ಕಿಕ ಅಂತ್ಯ ಕಾಣುವುದಿಲ್ಲ. ಯಾರೋ ಮಾಡದೇ ಇರೋ ಸಾಧನೆ. ತನಿಖೆ ಮಾಡುತ್ತಿದ್ದೇವೆ ಅಂತಾರೆ. ಆದರೆ ಪಾರದರ್ಶಕವಾಗಿ ಪರೀಕ್ಷೆ ನಡೆಸದ ಪರಿಣಾಮ ನಿಷ್ಠಾವಂತ ವಿದ್ಯಾರ್ಥಿಗಳಿಗೆ ಇವರು ಅನ್ಯಾಯ ಮಾಡುತ್ತಿದ್ದಾರೆ. ದಂಧೆಕೋರರು ಹೇಳಿದ ಹಾಗೆ ಸರ್ಕಾರ ತನಿಖೆ ನಡೆಸುತ್ತಿದೆ ಎಂದು ಕಿಡಿಕಾರಿದರು.
ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲ: ಕಲ್ಯಾಣ ಕರ್ನಾಟಕ್ಕೆ ಭಾಗಕ್ಕೆ ಕೋಟ್ಯಂತರ ರೂಪಾಯಿ ಅನುದಾನ ನೀಡಿದ್ದೇವೆ ಎನ್ನುವ ಸರ್ಕಾರ ನೀಡಿದ ಅನುದಾನವನ್ನು ಬಳಕೆ ಮಾಡುತ್ತಿಲ್ಲ. ಈ ಭಾಗದ ಪ್ರತಿ ಹಳ್ಳಿಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಬದಲಾಗಿ ಅಭಿವೃದ್ಧಿ ಹೆಸರಿನ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಸರ್ಕಾರ ಅಧಿಕಾರ ಬಂದ ಮೇಲೆ ಶೇ.20, 30 ರಷ್ಟುಕೆಲಸವೇ ಆಗಿಲ್ಲ. ಕೊಟ್ಟ ಅನುದಾನವನ್ನು ಸಹ ಬೇರೆ ಕಡೆ ಡೈವರ್ಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜನರನ್ನು ದಾರಿ ತಪ್ಪಿಸಲು ಘೋಷಣೆ: ಪಂಚರತ್ನ ಯಾತ್ರೆ ಪ್ರತಿಯೊಂದು ಕುಟುಂಬಕ್ಕೂ ಅನುಕೂಲವಾಗುವ ಕಾರ್ಯಕ್ರಮ. ಈಗಿನ ಸರ್ಕಾರದಲ್ಲಿ ಬಡವರು ಬಡವರಾಗೆ ಉಳಿದ್ದಾರೆ. ಶ್ರೀಮಂತರು ಶ್ರೀಮಂತರಾಗೇ ಇದ್ದು, ಈ ಯಾತ್ರೆ ಬಡವ ಶ್ರೀಮಂತ ಎಂಬ ಅಸಮಾನತೆ ಹೋಗಲಾಡಿಸುತ್ತದೆ ಎಂದರು. ಇನ್ನು ಗಾಣಗಪುರ ಕ್ಷೇತ್ರವನ್ನು ಕಾಶಿಯ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇವೆ ಎಂದು ಸಿಎಂ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಹೆಚ್ಡಿಕೆ "ಈ ಮೂರು ತಿಂಗಳು ಸರ್ಕಾರ ಹೋದರೆ ಈ ಸಿಎಂ ಮಾತು ಯಾರು ಕೇಳುತ್ತಾರೆ. ಮೂರು ವರ್ಷ ಮಾಡದೆ ಇರುವರು ಗಾಣಗಪುರ ಅಭಿವೃದ್ಧಿ ಮಾಡುತ್ತಾರಾ?. ಜನರ ಮತಗಳನ್ನು ಗಳಿಸಲು, ಜನರನ್ನು ದಾರಿ ತಪ್ಪಿಸಲು ಘೋಷಣೆ ಮಾಡುತ್ತಾರೆ ವಿನಃ ನಿಮ್ಮಿಂದ ಯಾವ ಕೆಲಸವಾಗಲ್ಲ ಎಂದರು.
ರಾಜ್ಯ ಪ್ರವಾಸಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಪ್ರಕ್ರಿಯಿಸುತ್ತಾ, ಎಲ್ಲ ಪಕ್ಷಗಳು ತಮ್ಮ ಸಂಖ್ಯೆಯನ್ನು ಹೆಚ್ಚಿಕೊಳ್ಳಲು ಹೋರಾಟ ಮಾಡುತ್ತೀವೆ. ಮಂಡ್ಯದಲ್ಲಿ ಜೆಡಿಎಸ್ ಭದ್ರಕೋಟೆ ಈ ಸಲ ಮುಗಿಸಬೇಕು ಅಂತಾ ಹೊರಟ್ಟಿದ್ದಾರೆ. ಈ ಬಗ್ಗೆ ಜನ ತಿರ್ಮಾನ ಮಾಡುತ್ತಾರೆ ಎಂದರು.
ಬಿ.ಎಲ್.ಸಂತೋಷ್ ಯಾರು?: ನಿಖಿಲ್ ಹಾಗೂ ಸುಮಲತಾ ವಿಚಾರದ ಬಗ್ಗೆ ಪ್ರಕ್ರಿಯೆ ನೀಡಿದ ಕುಮಾರಸ್ವಾಮಿ, ಸುಮಲತಾ ದೊಡ್ಡವರು ಇದ್ದಾರೆ. ನಿಖಿಲ್ಗೂ ಅದಕ್ಕೂ ಸಂಬಂಧವಿಲ್ಲ. ಸುಮಲತಾ ಅವರ ಹೆಸರು ಬಳಸದೇ ಅವರು ದೊಡ್ಡವರು ಬೆಳೆದು ಬಿಟ್ಟಿದ್ದಾರೆ. ನಾವು ಎಲ್ಲಾ ಸಣ್ಣ ಜನ. ಅವರ ಬಗ್ಗೆ ಚರ್ಚೆ ಮಾಡುವುದು ಬೇಡ ಎಂದು ವ್ಯಂಗ್ಯವಾಡಿದರು. ಹಳೆ ಮೈಸೂರು ಭಾಗದಲ್ಲಿ 40 ಸೀಟು ಬಿಜೆಪಿ ಗೆಲುವು ವಿಚಾರದಲ್ಲಿ ಬಿ.ಎಲ್.ಸಂತೋಷ್ ನೀಡಿದ ಹೇಳಿಕೆಗೆ, ಬಿ.ಎಲ್.ಸಂತೋಷ್ ಯಾರು?. ನನಗಂತೂ ಗೊತ್ತಿಲ್ಲ. ಅವರು 40 ಸೀಟು ಗೆಲುತ್ತಾರೆ ಎಂದರೆ ನಾವು ಯಾಕೆ ಇರಬೇಕು ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಬಿಜೆಪಿಯ ಶಾಸಕರಲ್ಲೇ ಕೆಸರೆರಚಾಟ ಆರಂಭ: ಹೆಚ್.ಡಿ.ಕುಮಾರಸ್ವಾಮಿ