ರಾಯಚೂರು: ಭಾನುವಾರ ಲಾಕ್‌ಡೌನ್ ಆದೇಶದ ನಡುವೆಯೂ ಇಂದು ಗುರುಪೂರ್ಣಿಮಾ ಹುಣ್ಣಿಮೆ ಹಿನ್ನೆಲೆ ನಗರದ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲಾಗಿದೆ.
ಕೊರೊನಾ ಸೋಂಕು ನಿಯಂತ್ರಿಸಲು ಸರ್ಕಾರ ಭಾನುವಾರ ಲಾಕ್‌ಡೌನ್ ಆದೇಶ ಜಾರಿಗೊಳಿಸಿದೆ. ಆದರೆ, ಇಲ್ಲಿನ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ಗುರು ಪೂರ್ಣಿಮೆ ಆಚರಿಸಲಾಗಿದೆ.
ನಗರದ ರಂಗಮಂದಿರ ಹಿಂಬದಿಯಲ್ಲಿರುವ ಶ್ರೀ ಸಾಯಿಬಾಬಾ ದೇವಸ್ಥಾನವನ್ನು ವಿಶೇಷವಾಗಿ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಸ್ಥಾನಕ್ಕೆ ಬರುವ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ಕೊರೊನಾ ಭೀತಿ ಹಿನ್ನೆಲೆ ಭಕ್ತರು ಗುಂಪು ಗುಂಪಾಗಿ ಸೇರದಂತೆ ಜಾಗೃತಿ ವಹಿಸಲಾಯಿತು.