ರಾಯಚೂರು: ಕರ್ನಾಟಕ ಸರ್ಕಾರಿ ವಾಹನ ಚಾಲಕರ ಕೇಂದ್ರ ಸಂಘದ ವತಿಯಿಂದ ಜಿಲ್ಲಾ ಘಟಕದ ನೂತನ ಕಟ್ಟಡ ನಿರ್ಮಾಣ ಹಾಗೂ ವಾಹನ ಚಾಲಕರಿಗೆ 8 ಎಕರೆ ಸರ್ಕಾರಿ ಭೂಮಿ ನೀಡುವಂತೆ ಶಾಸಕ ಡಾ. ಶಿವರಾಜ ಪಾಟೀಲ್‌ರನ್ನು ಒತ್ತಾಯಿಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಂಘದ ನೂತನ ಕಟ್ಟಡ ನಿರ್ಮಿಸಲು ಶಾಸಕರ ನಿಧಿಯಲ್ಲಿ ಅನುದಾನ ಬಿಡುಗಡೆ ಮಾಡಿಕೊಡುವಂತೆ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರೆಲ್ಲರೂ ಸೇರಿ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿಗೆ ಶಾಸಕರು ಸ್ಪಂದಿಸಿ, ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ 8 ಎಕರೆ ಭೂಮಿಯ ಬದಲಿಗೆ ಸರ್ಕಾರದಿಂದ ಮನೆ ಕೊಡಿಸುವುದಾಗಿ ಹೇಳಿ ಆಪ್ತ ಕಾರ್ಯದರ್ಶಿಯವರಿಗೆ ವಾಹನ ಚಾಲಕರ ವಿವರಗಳನ್ನು ನೀಡುವಂತೆ ಸೂಚಿದರು. ಈ ಸಂದರ್ಭದಲ್ಲಿ ಸ.ವಾ.ಚಾ.ಕೇ.ಸಂಘ, ಜಿಲ್ಲಾ ಘಟಕದ ಕಾರ್ಯದರ್ಶಿ ಬಸವರಾಜಗೌಡ ಮತ್ತಿತರರು ಇದ್ದರು.