ETV Bharat / state

ರಾಯಚೂರು : ಗ್ಯಾಸ್ ಸಿಲಿಂಡರ್ ಲೀಕ್, ಬ್ಲಾಸ್ಟ್​.. ತಪ್ಪಿದ ಭಾರೀ ಅನಾಹುತ - gas cylinder leak and Fire

ಸ್ಥಳಕ್ಕೆ ಧಾವಿಸಿದ ಗ್ಯಾಸ್ ಅಂಗಡಿಯ ಸಿಬ್ಬಂದಿ ಬೆಂಕಿ ನಂದಿಸುವ ಮೂಲಕ ಭಾರೀ ಅನಾಹುತ ತಪ್ಪಿಸಿದ್ದು, ಯಾವುದೇ ಜೀವ ಹಾನಿಯಾಗಿಲ್ಲ. ಗ್ಯಾಸ್ ಲೀಕ್‌ನಿಂದಾಗಿ ಬಡಾವಣೆಯಲ್ಲಿ ಗ್ಯಾಸ್ ವಾಸನೆ ಹರಡಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು..

Gas cylinder leak and blast in a house in Raichur
ಗ್ಯಾಸ್ ಸಿಲಿಂಡರ್ ಲೀಕ್, ಬ್ಲಾಸ್ಟ್​: ತಪ್ಪಿದ ಭಾರೀ ಅನಾಹುತ
author img

By

Published : Dec 26, 2020, 12:17 PM IST

ರಾಯಚೂರು : ಮನೆಯೊಂದರಲ್ಲಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಬ್ಲಾಸ್ಟ್​ ಆದ ಘಟನೆ ರಾಯಚೂರಿನಲ್ಲಿ ನಡೆದಿದೆ.

ಗ್ಯಾಸ್ ಸಿಲಿಂಡರ್ ಲೀಕ್, ಬ್ಲಾಸ್ಟ್​.. ತಪ್ಪಿದ ಭಾರೀ ಅನಾಹುತ

ನಗರದ ವಾಸವಿ ನಗರದ ಶರಣಗೌಡ ಎನ್ನುವವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಬ್ಲಾಸ್ಟ್ ಆಗಿದೆ. ಅದಾಗಲೇ ಬಳಸುತ್ತಿದ್ದ ಸಿಲಿಂಡರ್ ಇಂದು ಬೆಳಗ್ಗೆಯಷ್ಟೇ ಮುಗಿದ ಹಿನ್ನೆಲೆ ಹೊಸ ಗ್ಯಾಸ್ ಸಿಲಿಂಡರ್ ಫಿಕ್ಸ್ ಮಾಡಿ ಬಳಸಲಾಗುತ್ತಿತ್ತು. ಈ ವೇಳೆ ಗ್ಯಾಸ್ ಸಿಲಿಂಡರ್ ಲೀಕ್‌ ಆಗಿ ಬೆಂಕಿ ಅವಘಡ ಸಂಭವಿಸಿದೆ.

ಸ್ಥಳಕ್ಕೆ ಧಾವಿಸಿದ ಗ್ಯಾಸ್ ಅಂಗಡಿಯ ಸಿಬ್ಬಂದಿ ಬೆಂಕಿ ನಂದಿಸುವ ಮೂಲಕ ಭಾರೀ ಅನಾಹುತ ತಪ್ಪಿಸಿದ್ದು, ಯಾವುದೇ ಜೀವ ಹಾನಿಯಾಗಿಲ್ಲ. ಗ್ಯಾಸ್ ಲೀಕ್‌ನಿಂದಾಗಿ ಬಡಾವಣೆಯಲ್ಲಿ ಗ್ಯಾಸ್ ವಾಸನೆ ಹರಡಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಸುದ್ದಿ ತಿಳಿದು ಸ್ಥಳಕ್ಕೆ ದೌಡಯಿಸಿದ ಅಗ್ನಿಶಾಮಕ ಸಿಬ್ಬಂದಿ ಗ್ಯಾಸ್ ಸಿಲಿಂಡರ್‌ ಹೊರ ತೆಗೆದು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಆತಂಕ ದೂರು ಮಾಡಿದರು. ನೇತಾಜಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.