ರಾಯಚೂರು: ರಾಷ್ಟ್ರಪಿತ ಮಹಾತ್ಮಗಾಂಧಿ ಅವರ 150 ನೇ ಜನ್ಮದಿನದ ಅಂಗವಾಗಿ ಜಿಲ್ಲಾಡಳಿತ, ಜಿ.ಪಂ.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಗರಸಭೆಯ ಸಂಯುಕ್ತಾಶ್ರಯದಲ್ಲಿ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ವಿಚಾರ ಸಂಕೀರಣ ಸರ್ವಧರ್ಮ ಪ್ರಾರ್ಥನೆ, ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹೆಲ್ಮೆಟ್ ದಿನವೆಂದು ವಿಭಿನ್ನವಾಗಿ ಆಚರಿಸಲಾಯಿತು.
ಜಿ.ಪಂ.ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕಲಾವಿದರಿಂದ ರಘುಪತಿರಾಘವ ರಾಜಾರಾಮ ಗೀತೆ ಹಾಡಲಾಯಿತು ಇದಕ್ಕೆ ಶಾಲಾ ಮಕ್ಕಳು ಧ್ವನಿಗೂಡಿಸಿದರು.
ಗಾಂಧಿ ಜಯಂತಿಯ ಅಂಗವಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹೆಲ್ಮೆಟ್ ದಿನವೆಂದು ವಿಭಿನ್ನವಾಗಿ ಆಚರಿಸಲಾಯಿತು. ಸಾರ್ವಜನಿಕರು, ದ್ವಿಚಕ್ರ ವಾಹನದಲ್ಲಿ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಬಳಸಿ ಅಪಘಾತದಿಂದ ಜೀವ ಉಳಿಸುಕೊಳ್ಳಿ ಎಂಬ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಪೊಲೀಸ್ ಇಲಾಖೆ ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ ಹಿಡಿದು 1000 ದಂಡ ಹಾಕಿ ಅವರಿಗೆ ಅದ್ರಲ್ಲಿ ಹೆಲ್ಮೆಟ್ ನೀಡಿ ಸಂಚಾರಿ ನಿಯಮ ಪಾಲನೆ ಹಾಗೂ ಜೀವ ರಕ್ಷಿಸಲು ಹೆಲ್ಮೆಟ್ ಧರಿಸಿ ಎಂದು ಮನವರಿಕೆ ಮಾಡಿಕೊಡಲಾಯಿತು.
ರಸ್ತೆ ಅಪಘಾತದ ಸಂದರ್ಭದಲ್ಲಿ ತಲೆಗೆ ಪೆಟ್ಟುಬಿದ್ದು ಸಾವನ್ನಪ್ಪುವ ಸಂದರ್ಭಗಳು ಹೆಚ್ಚಿರುವ ಕಾರಣ ಜನರಲ್ಲಿ ಅರಿವು ಮೂಡಿಸುವ ಪ್ರಯುಕ್ತ ಉಚಿತವಾಗಿ ಇಪ್ಪತ್ತು ಹೆಲ್ಮೆಟ್ಗಳನ್ನು ನೀಡಿದರು.
ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಸಂಸದ ಬಿ.ವಿ.ನಾಯಕ ಅವರ ನೇತೃತ್ವದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿನ ಮಹಾತ್ಮಾಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸದ್ಭಾವನಾ ಯಾತ್ರೆಗೆ ಚಾಲನೆ ನೀಡಲಾಯಿತು. ಡಾ.ಬಿ.ಆರದ.ಅಂಬೇಡ್ಕರ್ ಸರ್ಕಲ್, ನಗರಸಭೆಯ ಕಚೇರಿಯ ಮುಂಭಾಗದಿಂದ ಜಿಲ್ಲಾ ಕಾಂಗ್ರೆಸ್ ಕಚೇರಿವರೆಗೆ ಈ ಯಾತ್ರೆ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಪೊಲೀಸ್ ಇಲಾಖೆ, ಗ್ರೀನ್ ರಾಯಚೂರಿನ ಸಹಯೋಗದಲ್ಲಿ ನಗರದ ರಾಯಚೂರು ಕೋಟೆಯಲ್ಲಿ ಬೆಳೆದ ಹುಲ್ಲು ,ಕಸ ಕ್ಲೀನ್ ಮಾಡಿ ವಿಭಿನ್ನವಾಗಿ ಗಾಂಧಿ ಜಯಂತಿ ಆಚರಿಸಿದೆ.
ಸ್ವಚ್ಛತೆಯ ಅಭಿಯಾನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಹಾಗೂ ಶಾಸಕ ಡಾ.ಶಿವರಾಜ ಪಾಟೀಲ್ ಪೊರಕೆ ಹಿಡಿದು ಕಸ ಗೂಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೆಂಕಟೇಶ ಕುಮಾರ, ಜಿ.ಪಂ.ಸಿಇಓ ಲಕ್ಷ್ಮಿಕಾಂತ ರೆಡ್ಡಿ, ಬ್ರಹ್ಮಕುಮಾರಿ ಈಶ್ವರಿಯ ಮಹಾವಿದ್ಯಾಲಯದ ರಾಜಯೋಗಿನಿ ಪೂಜ್ಯ ಸ್ಮಿತಾ ಅಕ್ಕ ನಗರಸಭೆ ಅಧಿಕಾರಿಗಳು ಸಾಥ್ ನೀಡಿದ್ದಾರೆ.