ರಾಯಚೂರು: ಇಂದು ನಾಲ್ವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 473ಕ್ಕೆ ಏರಿಕೆಯಾಗಿದೆ.
ಸೋಂಕಿತರೆಲ್ಲರೂ ತಾಲೂಕಿನವರಾಗಿದ್ದು, ಇವರೆಲ್ಲರನ್ನು ಐಸೋಲೇಷನ್ ವಾರ್ಡ್ಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ 68 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಸ್ಥಳೀಯ ಒಪೆಕ್ ಆಸ್ಪತ್ರೆಯಲ್ಲಿ 43 ಜನರಿಗೆ ಹಾಗೂ ಕ್ವಾರಂಟೈನ್ನಲ್ಲಿ 25 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಯೋಗಾಲಯದಿಂದ ಇನ್ನೂ 1,304 ಜನರ ವರದಿ ಬರುವುದು ಬಾಕಿಯಿದ್ದು, ಇದುವರೆಗೂ ಗುಣಮುಖರಾದ 400 ಸೋಂಕಿತರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.