ETV Bharat / state

ಮಸ್ಕಿ: 15ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದ್ದ ಕಪಿ ಸೆರೆ

ಕೋತಿಯೊಂದು ಕಳೆದ ಮೂರು ದಿನಗಳಿಂದ ಮಸ್ಕಿ ಪಟ್ಟಣದಲ್ಲಿ ತಿರುಗಾಡುತ್ತಿದ್ದು, ಕಂಡ ಕಂಡವರ ಮೇಲೆ ದಾಳಿ ನಡೆಸಿ ಭಯದ ವಾತಾವರಣ ಮೂಡಿಸಿತ್ತು.

monkey
ಕಪಿ ಸೆರೆ
author img

By

Published : Jun 23, 2021, 7:58 AM IST

ರಾಯಚೂರು: ಕೋತಿಯೊಂದು 15ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ್ದ ಘಟನೆ ಮಸ್ಕಿ ಪಟ್ಟಣದಲ್ಲಿ ನಡೆದಿತ್ತು. ಮಂಗನನ್ನು ಸೆರೆ ಹಿಡಿಯುವಂತೆ ಸಾರ್ವಜನಿಕರು ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಇಂದು ಮುಂಜಾನೆ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿ ಕೋತಿ ಸೆರೆ ಹಿಡಿದಿದ್ದಾರೆ.

ಕಳೆದ ಮೂರು ದಿನಗಳಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಜನರ ಮೇಲೆ ಕೋತಿ ದಾಳಿ ನಡೆಸಿತ್ತು. ಕಪಿಚೇಷ್ಠೆಯಿಂದಾಗಿ ಪಟ್ಟಣದ ಜನತೆ ರೋಸಿ ಹೋಗಿದ್ದು, ಭಯದ ವಾತಾವರಣವನ್ನು ಮೂಡಿಸಿತ್ತು. ಪಟ್ಟಣದ ಜಾಲಗಾರ ಬಡeವಣೆ, ವಾಲ್ಮೀಕಿ ಭವನ, ಭ್ರಮರಂಬಾ ದೇವಾಲಯ, ಪೊಲೀಸ್ ವಸತಿ ಗೃಹ ಸೇರಿದಂತೆ ‌ಎಲ್ಲಾ ಕಡೆ ಓಡಾಡುತ್ತಿದ್ದ ಕೋತಿ ಕಂಡ ಕಂಡವರ ಮೇಲೆ ದಾಳಿ ನಡೆಸುತ್ತಿತ್ತು. ಹೀಗಾಗಿ ಜನರು ರಸ್ತೆಗಳಲ್ಲಿ ಓಡಾಡುವುದಕ್ಕೂ ಭಯ ಪಡುವಂತೆ ಮಾಡಿತ್ತು. ಅಲ್ಲದೆ ಮಂಗಳವಾರದಂದು ಪೊಲೀಸ್ ಕಾನ್​ಸ್ಟೇಬಲ್‌ ಸೇರಿದಂತೆ 6 ಜನರ ಮೇಲೆ ಹಲ್ಲೆ ಮಾಡಿತ್ತು.

ಜನತೆ ಮನವಿಗೆ ಸ್ಪಂದಿಸಿದ ಅರಣ್ಯ ಅಧಿಕಾರಿಗಳು ಇಂದು ಬೆಳಿಗ್ಗೆ ಕೋತಿಯನ್ನ ಸೆರೆ ಹಿಡಿಯುವಲ್ಲಿ ಯಶ್ವಸಿಯಾಗಿದ್ದಾರೆ. ಸದ್ಯ ಮಸ್ಕಿ ಪಟ್ಟಣದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಇದನ್ನೂ ಓದಿ: ಓರ್ವ ವಿದ್ಯಾರ್ಥಿ ಮೃತಪಟ್ಟರೂ ನೀವೇ ಹೊಣೆ: ಆಂಧ್ರ, ಕೇರಳಕ್ಕೆ ಸುಪ್ರೀಂಕೋರ್ಟ್‌ ಎಚ್ಚರಿಕೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.