ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣ ನದಿಗೆ ನೀರು ಹರಿಬಿಟ್ಟ ಹಿನ್ನಲೆ, ರಾಯಚೂರು ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 3 ಬೋಟ್ಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಾರಾಯಣಪುರ ಜಲಾಶಯದಿಂದ 1,02,240 ಕ್ಯೂಸೆಕ್ ನೀರು ಹರಿ ಬಿಡಲಾಗಿದ್ದು, ಜಲಾಶಯದ ಒಳಹರಿವು ಹೆಚ್ಚಾದರೆ, ಪ್ರವಾಹ ಭೀತಿ ಎದುರಾಗಲಿದೆ. ಹೀಗಾಗಿ ನದಿ ಪಾತ್ರದಲ್ಲಿನ ಜನ,ಜಾನುವಾರುಗಳನ್ನ ರಕ್ಷಣೆ ಮಾಡುವ ನಿಟ್ಟಿನಲ್ಲಿ ಮೂರು ಬೋಟ್ಗಳನ್ನ ತಯಾರು ಮಾಡಿಕೊಳ್ಳಲಾಗಿದೆ. ಬೋಟ್ಗಳನ್ನ ರಾಯಚೂರು ಜಿಲ್ಲೆಯ ಲಿಂಗಸೂಗೂರಿನ ಅಗ್ನಿಶಾಮಕ ದಳ ಕಚೇರಿ, ವಿಪತ್ತು ನಿರ್ವಹಣಾ ಘಟಕ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಇರಿಸಲಾಗಿದೆ.
ಬೋಟ್ ಅವಶ್ಯಕತೆಯಿದೆ ಇದ್ದಲ್ಲಿ ಸಂಪರ್ಕಿಸಿದ ಬೇಕಾದ ಅಧಿಕಾರಿಗಳು ದೂರವಾಣಿ ನಂಬರ್
ರವೀಂದ್ರ ಘಟಕೆ, ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿಗಳು,ರಾಯಚೂರು-9740624022, 08532-235999/101
ಕಾಶಪ್ಪನವರ, ಡಿವೈಎಸ್ಪಿ, ರಾಯಚೂರು-9480803806
ವಿರುಪಾಕ್ಷಿ, ಪೊಲೀಸ್ ಇಲಾಖೆ-9880461822
ಬಸವರಾಜ್,ಎಎಸ್ಐ-9741285764