ರಾಯಚೂರು: ಮಸ್ಕಿ ನಾಲಾ ಜಲಾಶಯದ ನೀರನ್ನು ಸಿಂಧನೂರು ತಾಲೂಕಿನ ಕನಕ ನಾಲಾಕ್ಕೆ ಜೋಡಿಸುವ ಸರ್ಕಾರದ ನಿರ್ಧಾರ ವಿರೋಧಿಸಿ ಮಸ್ಕಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಸ್ಕಿ ಜಲಾಶಯದ ನೀರು ರೈತರ ಒಂದು ಬೆಳೆಗೆ ಸಾಕಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಜಲಾಶಯಕ್ಕೆ ಹರಿದು ಬರುವ ನೀರನ್ನು ಮತ್ತೊಂದು ಜಲಾಶಯಕ್ಕೆ ಸೇರಿಸಲು ಹೊರಟಿದೆ. ಇದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ ರೈತರು ಕನಕ ವೃತ್ತ ಹಾಗೂ ಹಳೆ ಬಸ್ ನಿಲ್ದಾಣದ ಬಳಿ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೂಡಲೇ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ.