ಲಿಂಗಸೂಗೂರು : ತಾಲೂಕಿನ ಹಾಲಭಾವಿ ಗ್ರಾಮದಲ್ಲಿರುವ ವಯೋವೃದ್ಧರು ಕೈ-ಕೈ ಹಿಡಿದು ನಡೆದಾಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮೆಚ್ಚುಗೆ ಪಡೆದು ಜೋಡಿ ಹಕ್ಕಿಗಳೆಂದು ಗುರುತಿಸಿಕೊಂಡಿದ್ದಾರೆ.
ಹಾಲಭಾವಿ ಗ್ರಾಮದ ಅಮರಪ್ಪ ಬಿಸೇನಿ (70), ಹನುಮಂತಿ ಬಿಸೇನಿ (65) ದಂಪತಿಗೆ ಎರಡು ಗಂಡು, ಮೂರು ಹೆಣ್ಣು ಮಕ್ಕಳು. ಕೃಷಿ ಕೆಲಸ ಮಾಡುವಾಗ ಸಜ್ಜೆ ಹೂಬು ಕಣ್ಣಿಗೆ ಬಡಿದು ಅಮರಪ್ಪ ಅವರಿಗೆ ದೃಷ್ಠಿ ದೋಷಕ್ಕೆ ಕಾರಣವಾಯಿತು. ಅಂದಿನಿಂದ ಹೆಂಡತಿ ಹನುಮಂತಿ ಅವರ ಕೈ ಹಿಡಿದು ನಡೆಸುತ್ತ ಬಂದಿದ್ದಾರೆ. ಎಲ್ಲಿಯೇ ಹೋದರು ಇಬ್ಬರು ಒಟ್ಟಿಗೆ ಹೋಗುತ್ತಾರೆ.
ಜೀವ ಇರುವವರೆಗೆ ಹೀಗೆ ಇರುತ್ತೇವೆ ಎಂದು ಹೇಳುತ್ತಾರೆ ಈ ಜೋಡಿ. ಈ ವಯೋವೃದ್ಧರ ಪ್ರೀತಿ, ಆತ್ಮೀಯತೆ, ಕಾಳಜಿ ಪ್ರಸ್ತುತ ಯುವ ಸಮಾಜಕ್ಕೆ ಮಾದರಿ ಆಗಿದೆ.