ETV Bharat / state

2 ನದಿಗಳಿದ್ರು ಕುಡಿಯುವ ನೀರಿಗಾಗಿ ಪರದಾಟ... ರಾಯಚೂರು ಜಿಲ್ಲೆಯ ಜನರಿಗೆ ತಪ್ಪದ ಸಂಕಷ್ಟ! - ಜಿಲ್ಲೆಯಲ್ಲಿ 2 ನದಿಗಳಿದ್ರೂ ಕುಡಿಯುವ ನೀರಿಗೆ ಹಾಹಾಕಾರ

ರಾಯಚೂರು ಜಿಲ್ಲೆಯಲ್ಲಿ ಬೇಸಿಗೆ ಬಂತಂದ್ರೆ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತೆ. ಈಗಾಗಲೇ ಅನೇಕರು ನೀರಿಗಾಗಿ ಪರದಾಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

ಕುಡಿಯುವ ನೀರಿಗೆ ಹಾಹಾಕಾರ
ಕುಡಿಯುವ ನೀರಿಗೆ ಹಾಹಾಕಾರ
author img

By

Published : Apr 22, 2020, 7:52 PM IST

ರಾಯಚೂರು: ಜಿಲ್ಲೆಯ ಎಡ ಭಾಗದಲ್ಲಿ ತುಂಗಭದ್ರೆ, ಬಲಭಾಗದಲ್ಲಿ ಕೃಷ್ಣಾ ನದಿ ವಿಶಾಲವಾಗಿ ಹರಿಯುತ್ತವೆ. ಇದರಿಂದ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಕೆ ಮಾಡಬಹುದು. ಆದ್ರೆ ಬೇಸಿಗೆ ಸಮಯ ಬಂತಂದ್ರೆ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದ್ದು, ಜೀವಜಲಕ್ಕಾಗಿ ಜನರು ಪರದಾಡುತ್ತಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಪರದಾಟ

ಜಿಲ್ಲೆಯಲ್ಲಿ ಮಾನವಿ, ಸಿಂಧನೂರು, ಮಸ್ಕಿ, ಲಿಂಗಸುಗೂರು, ದೇವದುರ್ಗ, ಸಿರವಾರ, ರಾಯಚೂರು ಸೇರಿದಂತೆ ಒಟ್ಟು 7 ತಾಲೂಕುಗಳಿವೆ. 1,457 ಜನವಸತಿ ಪ್ರದೇಶಗಳಿವೆ. ಜಿಲ್ಲೆಯ 163 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಉಳಿದ 172 ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಲಿದೆ. ಸಮಸ್ಯೆ ಉಲ್ಬಣಿಸುವ ಗ್ರಾಮಗಳಿಗೆ ನೀರು ಪೂರೈಕೆಗಾಗಿ ಖಾಸಗಿ ಬೋರ್​ ವೆಲ್, ಕೊಳವೆಬಾವಿ ಕೊರೆಸುವುದು ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದೆ. ಆದ್ರೆ ಈಗಾಗಲೇ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಜಕ್ಕೇರಮಡು ಗ್ರಾಮಸ್ಥರು ನೀರಿಗಾಗಿ ಪರಡಾಡುತ್ತಿದ್ದಾರೆ.

ಇನ್ನು ಜಿಲ್ಲೆಯ ಗ್ರಾಮಗಳನ್ನು ಹೊರತುಪಡಿಸಿ ಎರಡು ನಗರಸಭೆ, 6 ಪಟ್ಟಣ ಪಂಚಾಯತ್​, 3 ಪುರಸಭೆಗಳಿದ್ದು ಒಟ್ಟು 260 ವಾರ್ಡ್​ಗಳು ಇವೆ. ಈ ಪ್ರದೇಶಗಳಲ್ಲಿ ತುಂಗಭದ್ರಾ ಜಲಾಶಯ, ನಾರಾಯಣಪುರ ಜಲಾಶಯದ ನಾಲೆಗಳ ಮೂಲಕ ಕುಡಿಯುವ ನೀರಿನ ಕೆರೆಗಳನ್ನು ಭರ್ತಿ ಮಾಡಿಕೊಂಡು ನೀರು ಪೂರೈಸಲಾಗುತ್ತಿದೆ ಅಂತ ಜಿಲ್ಲಾಡಳಿತ ಮಾಹಿತಿ ನೀಡುತ್ತಿದೆ. ಆದ್ರೆ ಕವಿತಾಳ ಪಟ್ಟಣದಲ್ಲಿ ಕುಡಿಯುವ ನೀರು ಪೂರೈಸುವಂತೆ ಸಂಘಟನೆಗಳು ಮನವಿ ಮಾಡುತ್ತಿವೆ.

ಜಿಲ್ಲೆಯಲ್ಲಿ ಎರಡು ನದಿಗಳು ಇದ್ದು ನೀರಿನ ಕೊರತೆ ಉಂಟಾಗಬಾರದು. ಲಭ್ಯವಿರುವ ಸಂಪನ್ಮೂಲ ಉಪಯೋಗಿಸಿಕೊಂಡು ನೀರು ಪೂರೈಸುವುದಕ್ಕೆ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತದೆ. ಆದ್ರೆ ಯೋಜನೆಗಳು ಸಮರ್ಪಕ ಅನುಷ್ಠಾನಗೊಳ್ಳದ ಪರಿಣಾಮ ಪ್ರತಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಪ್ರಸಕ್ತವಾಗಿ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬಹುತೇಕ ಅಧಿಕಾರಿಗಳು ಸೋಂಕು ಹರಡುವಿಕೆ ತಡೆಗಟ್ಟುವ ಕರ್ತವ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ನಡುವೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ.

ಒಟ್ಟಿನಲ್ಲಿ ಬೇಸಿಗೆ ಆರಂಭದಲ್ಲಿ ಕೆಲವೊಂದು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಮುಂದಿನ ದಿನಮಾನಗಳಲ್ಲಿ ಇದರ ಪ್ರಮಾಣ ಹೆಚ್ಚಾದರೆ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಜಿಲ್ಲಾಡಳಿತ, ಅವಶ್ಯಕ ಕ್ರಮ ಕೈಗೊಂಡಿರುವುದಾಗಿ ಹೇಳುತ್ತಿದೆ. ಆದ್ರೆ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕಾರ್ಯ ನಿರ್ವಹಿಸಲಿದೆ ಎನ್ನುವುದನ್ನು ಕಾದು ನೋಡಬೇಕಿಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.