ETV Bharat / state

ಕಲ್ಯಾಣ ಕರ್ನಾಟಕದವರಿಗೆ ಡಿಸಿಎಂ ಸ್ಥಾನವನ್ನು ನೀಡಬೇಕು: ಮಠಾಧೀಶರ ಒತ್ತಾಯ

ಕಲ್ಯಾಣ ಕರ್ನಾಟಕ ಭಾಗದ ವಿವಿಧ ಮಠದ ಸ್ವಾಮೀಜಿಗಳು ಕೆಪಿಸಿಸಿ ಕಾರ್ಯದರ್ಶಿ ಈಶ್ವರ ಖಂಡ್ರೆ ಅವರನ್ನು ಡಿಸಿಎಂ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

dcm-post-to-kalyana-karnataka-insists-from-pontiff
ಕಲ್ಯಾಣ ಕರ್ನಾಟಕದವರಿಗೆ ಡಿಸಿಎಂ ಸ್ಥಾನವನ್ನು ನೀಡಬೇಕು: ಮಠಾಧೀಶರ ಒತ್ತಾಯ
author img

By

Published : May 16, 2023, 10:41 PM IST

Updated : May 16, 2023, 11:03 PM IST

ಕಲ್ಯಾಣ ಕರ್ನಾಟಕದವರಿಗೆ ಡಿಸಿಎಂ ಸ್ಥಾನವನ್ನು ನೀಡಬೇಕು: ಮಠಾಧೀಶರ ಒತ್ತಾಯ

ರಾಯಚೂರು: ಕಲ್ಯಾಣ ಕರ್ನಾಟಕ ಭಾಗಕ್ಕೆ ಡಾ. ಡಿ ಎಂ ನಂಜುಂಡಪ್ಪ ವರದಿ ಅನ್ವಯ ಮಾಡಬೇಕು ಮತ್ತು ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ರಾಯಚೂರು ಜಿಲ್ಲೆಯ ವಿವಿಧ ಮಠಗಳ ಮಠಾಧೀಶರು ಒತ್ತಾಯಿಸಿದ್ದಾರೆ.

ನಗರದ ಕಿಲ್ಲೆ ಬೃಹನ್ಮಠದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಬಿಚ್ಚಾಲಿ ಮಠದ ವೀರತಪ್ಸವಿ ಶ್ರೀ ವೀರಭದ್ರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು 108 ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು, ಕಲ್ಯಾಣ ಕರ್ನಾಟಕ ಭಾಗದಲ್ಲಿ ನಂಜುಂಡಪ್ಪ ವರದಿಯ ಪ್ರಕಾರವಾಗಿ ಪ್ರಾದೇಶಿಕ ಅಸಮತೋಲನೆ ನಿರ್ಮೂಲನೆ ಮಾಡಬೇಕು. ಆದರೆ ನಂಜುಂಡಪ್ಪ ವರದಿ ವರದಿಯಾಗಿಯೇ ಉಳಿದುಕೊಂಡಿದೆ. ಹಿಂದಿನ ಯಾವ ಸರ್ಕಾರಗಳು ವರದಿಯನ್ನು ಜಾರಿಗೆ ತರಲು ಪ್ರಯತ್ನಿಸಲಿಲ್ಲ ಎಂದು ಆರೋಪಿಸಿದರು.

ನೂತನವಾಗಿ ರಚನೆಯಾಗಲಿರುವ ಸರ್ಕಾರಕ್ಕೆ ಶುಭ ಹಾರೈಸಿ ನಂಜುಂಡಪ್ಪ ವರದಿ ಜಾರಿ ತಂದು ಕಲ್ಯಾಣ ಕರ್ನಾಟಕಕ್ಕೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು. ಸಿಂಧನೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಹಂಪನಗೌಡ ಬಾದರ್ಲಿ ಅವರಿಗೆ ಸಚಿವ ಸ್ಥಾನ ಮತ್ತು ಕೆಪಿಸಿಸಿ ಕಾರ್ಯದರ್ಶಿ ಈಶ್ವರ ಖಂಡ್ರೆಯವರಿಗೆ ಡಿಸಿಎಂ ಸ್ಥಾನವನ್ನು ನೀಡಬೇಕು ಎಂದು ವಿವಿಧ ಮಠಾಧೀಶರು ಒತ್ತಾಯ ಮಾಡಿದರು.

ಕಲ್ಯಾಣ ಕರ್ನಾಟಕ ಭಾಗದ ಜನರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಬೆಂಬಲವನ್ನು ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಕಲ್ಯಾಣ ಭಾಗಕ್ಕೆ ಆದ್ಯತೆ ನೀಡುವ ಮೂಲಕ ಸಚಿವ ಸ್ಥಾನಗಳು ಜೊತೆ ಡಿಸಿಎಂ ಸ್ಥಾನವನ್ನು ನೀಡಬೇಕು. ಪಕ್ಷ ಉಳಿಯಬೇಕು ಎಂದರೆ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕ ಭಾಗದವರಾಗಿ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಅದೇ ರೀತಿಯಲ್ಲಿ ಈ ಭಾಗಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದರು.

ಮಾಧ್ಯಮಗೋಷ್ಟಿಯಲ್ಲಿ ಸುಲ್ತಾನಪುರ ಮಠದ ಶ್ರೀಶಂಭುಸೋಮನಾಥ ಶ್ರೀಗಳು, ಮಂಗಳವಾರಪೇಟೆ ಮಠದ ಶ್ರೀವೀರಸಂಗಮೇಶ್ವರ ಶ್ರೀಗಳು, ಯದ್ದಲದೊಡ್ಡಿ ಮಠದ ಶ್ರೀಮಹಾಲಿಂಗ ಸ್ವಾಮಿಗಳು, ಶ್ರೀ ಅಭಿನವ ಸೋಮನಾಥ ಶಿವಾಚಾರ್ಯರು ಸೇರಿದಂತೆ ಇತರೆ ಮಠಾಧೀಶರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಸ್ಥಾನಕ್ಕೆ ಜಿ ಪರಮೇಶ್ವರ್​​ ಪರಿಗಣಿಸಿ: ಮಾಜಿ ಉಪಮುಖ್ಯಮಂತ್ರಿ, ಜಿ ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕೆಂದು ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು. ದಲಿತ ಸಮುದಾಯದ ವ್ಯಕ್ತಿ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಪೋಸ್ಟರ್​ಗಳನ್ನು ಹಿಡಿದು ಕಾರ್ಯಕರ್ತರು ಒತ್ತಾಯಿಸಿದರು. ತುಮಕೂರು ನಗರದ ಕಾಂಗ್ರೆಸ್ ಕಚೇರಿಯಿಂದ ಹೊರಟ ಪ್ರತಿಭಟನಾಕಾರರು ಭದ್ರಮ್ಮ ವೃತ್ತದ ಬಳಿಯವರೆಗೂ ಸಾಗಿದರು. ನಂತರ ಕೆಲಕಾಲ ಪ್ರತಿಭಟನೆ ನಡೆಸಿ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಪರಮೇಶ್ವರ್​ ಅವರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಸಿಎಂ ಯಾರೆಂದು ಬುಧವಾರ ಘೋಷಣೆ: ಮೂಲಗಳ ಪ್ರಕಾರ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಸಮಾಲೋಚಿಸಿದ ನಂತರ ಕರ್ನಾಟಕ ಸಿಎಂ ಸ್ಥಾನದ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ಬುಧವಾರ ರಾಜ್ಯದ ನೂತನ ಮುಖ್ಯಮಂತ್ರಿ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ..ಸಚಿವ ಸ್ಥಾನಕ್ಕೆ ಹಲವರ ಲಾಬಿ: ಖರ್ಗೆಗೆ ಪತ್ರ ಬರೆದ ಶಾಮನೂರು ಶಿವಶಂಕರಪ್ಪ

Last Updated : May 16, 2023, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.