ETV Bharat / state

ರಾಯಚೂರು: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವಿಚಾರವಾಗಿ ಎರಡು‌ ಗುಂಪುಗಳ ನಡುವೆ ಗಲಾಟೆ

ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಪೋಸ್ಟ್​ ವಿಚಾರವಾಗಿ ಎರಡು ಗುಂಪಗಳ ನಡುವೆ ಗಲಾಟೆ ನಡೆದಿದೆ.

ಎರಡು‌ ಗುಂಪು ನಡುವೆ ಗಲಾಟೆ
ಎರಡು‌ ಗುಂಪು ನಡುವೆ ಗಲಾಟೆ
author img

By

Published : Jul 17, 2023, 12:28 PM IST

Updated : Jul 17, 2023, 4:57 PM IST

ರಾಯಚೂರು: ಸಿಂಧನೂರು ತಾಲೂಕಿನ ಬೆಂಗಾಲಿ ಕ್ಯಾಂಪ್-2ರಲ್ಲಿ‌ ಭಾನುವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಪೋಸ್ಟ್ ವಿಚಾರವಾಗಿ ಎರಡು‌ ಗುಂಪುಗಳ ನಡುವೆ ಗಲಾಟೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಒಂದು ಗುಂಪು ಧಾರ್ಮಿಕ ವಿಚಾರವಾಗಿ ಪೋಸ್ಟ್ ಮಾಡಿತ್ತು. ಇದನ್ನು ಮತ್ತೊಂದು ಕೋಮಿನವರು ಪ್ರಶ್ನಿಸಿದ್ದಾರೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ಉಂಟಾಗಿ ಗಲಾಟೆಯಾಗಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ‌ಸಿಂಧನೂರು ಗ್ರಾಮೀಣ ಪೊಲೀಸರು ದೌಡಾಯಿಸಿ ಎರಡು ಗಂಪನ್ನು ಚದುರಿಸಿದ್ದಾರೆ.

ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಮುಂಜಾಗ್ರತ ಕ್ರಮವಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಚಾರವಾಗಿ ಎಸ್ಪಿ ನಿಖಿಲ್ ಬಿ ದೂರವಾಣಿ ಮೂಲಕ‌ ಪ್ರತಿಕ್ರಿಯೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವಿಚಾರವಾಗಿ ಗಲಾಟೆಯಾಗಿದೆ. ಘಟನೆಯಲ್ಲಿ ಯಾರಿಗೂ ಏನು ಆಗಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ‌.

ಬೆಂಗಾಲಿ ಸಮುದಾಯದವರಿಂದ ಪ್ರತಿಭಟನೆ: ಘಟನೆ ಖಂಡಿಸಿ ಆರ್​ಹೆಚ್ ಕ್ಯಾಂಪ್-2ರಲ್ಲಿ ವಾಸಿಸುವ ಬೆಂಗಾಲಿ ಸಮುದಾಯದ ಜನರು ಸೋಮವಾರ ಪಟ್ಟಣದ ತಹಸೀಲ್ದಾರ್​ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ. ಇದರಿಂದ ಭಯಗೊಂಡ ನಮ್ಮವರು ಶಾಲೆ, ಕಾಲೇಜಿಗೆ ಹೋಗಲು ಹಿಂದೇಟು ಹಾಕುವಂತಹ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು, ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ನಮಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಸಮುದಾಯದವರು ತಹಸೀಲ್ದಾರ್​​ಗೆ ಮನವಿ ಸಲ್ಲಿಸಿದರು. ಗಲಾಟೆ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್​ ಮೂಲಗಳಿಂದ ತಿಳಿದುಬಂದಿದೆ.

ಮೈಸೂರಲ್ಲೂ ಇಂತಹದ್ದೇ ಘಟನೆ: ಎರಡು ಗುಂಪುಗಳ ನಡುವಿನ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯವಾಗಿದ್ದ ಘಟನೆ ನರಸೀಪುರ ತಾಲೂಕಿನ ಶ್ರೀರಾಂಪುರ ಬಡಾವಣೆಯಲ್ಲಿ ಜು.10ರಂದು ತಡರಾತ್ರಿ ನಡೆದಿತ್ತು. ನರಸೀಪುರ ಪಟ್ಟಣದ ಶ್ರೀರಾಂಪುರ ಕಾಲೋನಿಯ ವೇಣುಗೋಪಾಲ್ ನಾಯಕ್ (32) ಕೊಲೆಯಾದ ಯುವಕ. ಶನಿವಾರ ಹನುಮ ಜಯಂತಿ ಆಚರಣೆ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಸ್ಥಳದಲ್ಲಿದ್ದ ಕೆಲವರು ಉಭಯ ಬಣಗಳನ್ನೂ ಸಮಾಧಾನಪಡಿಸಿದ್ದರು. ಇದಾದ ನಂತರ ಮತ್ತೆ ಗಲಾಟೆ ನಡೆದು ಓರ್ವನ ಕೊಲೆ ನಡೆದಿತ್ತು.

ಇದನ್ನೂ ಓದಿ: ಎರಡು ಗುಂಪುಗಳ ನಡುವೆ ಗಲಾಟೆ: ಯುವಕನ ಹತ್ಯೆ

Last Updated : Jul 17, 2023, 4:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.