ರಾಯಚೂರು: ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಎಂ.ವೈ. ಕಾಳೆ ಪರ ಹಾಗೂ ವಿರೋಧವಾಗಿ ಎರಡು ದಲಿತ ಸಂಘನೆಗಳು ನಿಂತಿವೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಕಾಳೆಯವರು ಭ್ರಷ್ಟಾಚಾರ ಎಸಗಿದ್ದಾರೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಒಂದು ಸಂಘಟನೆ ಒತ್ತಾಯಿಸಿದೆ. ಆದ್ರೆ, ಅವರ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಮತ್ತೊಂದು ಸಂಘಟನೆ ಹೇಳುತ್ತಿದೆ.
ಭೂ ಒಡೆತನ ಯೋಜನೆ, ಕಿರುಸಾಲ, ನೇರ ಸಾಲ, ಉದ್ಯಮಶೀಲತೆ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಲ್ಲಿ ಎಂ.ವೈ. ಕಾಳೆ ಕೋಟ್ಯಂತರ ರೂ. ಭ್ರಷ್ಟಾಚಾರ ಮಾಡಿದ್ದಾರೆಂದು ದಲಿತ ಪ್ರಗತಿಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಎಂದು ಈರಣ್ಣ ಭಂಡಾರಿ ಆರೋಪಿಸಿದ್ದಾರೆ.
ಇತ್ತ ಕಾಳೆ ವಿರುದ್ಧ ಸುಳ್ಳು ಆರೋಪ ಮಾಡಿದ್ದು ಈ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ರವಿಂದ್ರನಾಥ ಪಟ್ಟಿ ಹೇಳಿದ್ದಾರೆ.