ರಾಯಚೂರು: ಭಾರತ ಲಾಕ್ಡೌನ್ ಯಶಸ್ವಿಗೊಳಿಸಿ ಕೊರೊನಾ ಹರಡದಂತೆ ತಡೆಯಲು ನಾಗರಿಕರು ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ನರಸಿಂಹಮೂರ್ತಿ ಮನವಿ ಮಾಡಿದ್ರು.
ಜಿಲ್ಲೆಯ ಲಿಂಗಸುಗೂರು ತಾಲೂಕು ಮುದಗಲ್ಲ ಪುರಸಭೆ ವ್ಯಾಪ್ತಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಬಗ್ಗೆ ಭಯ ಬೇಡ. ನಿಮ್ಮೊಂದಿಗೆ ಸರ್ಕಾರ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಂಡ ನಿಯಮ ಪಾಲನೆಗೆ ಬದ್ಧರಾಗಬೇಕು. ಇಲ್ಲದೆ ಹೋದರೆ ಇನ್ನೂ ಸಂಕಷ್ಟ ಎದುರಿಸುವ ಕಾಲ ಸನ್ನಿಹಿತವಾಗುತ್ತಿದೆ ಎಂದು ಜಾಗೃತಿ ಮೂಡಿಸಿದರು.
ಪಿಎಸ್ಐ ಡಾಕೇಶ ನೇತೃತ್ವದಲ್ಲಿ ವಾರ್ಡ್ಗಳಲ್ಲಿ ಸಂಚರಿಸಿ ಮನೆಯಲ್ಲಿ ಇರುವಂತೆ ಮನವರಿಕೆ ಮಾಡಿಕೊಡಲಾಯಿತು.