ರಾಯಚೂರು : ಕೆಮಿಕಲ್ ಫಾಕ್ಟರಿಯಲ್ಲಿ ಕೆಮಿಕಲ್ ಲೀಕೇಜ್ ಆಗಿ ಓರ್ವ ಕಾರ್ಮಿಕ ಮೃತಪಟ್ಟಿದ್ದು, ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ತಾಲೂಕಿನ ಚಿಕ್ಕಸೂಗೂರು ಗ್ರಾಮದ ಬಳಿಯಿರುವ ಜೆ ವೈ ಕೆಮಿಕಲ್ ಫಾಕ್ಟರಿಯಲ್ಲಿ ನಡೆದಿದೆ.
ಪಿ.ರಂಗಡು(28) ಮೃತ ಕಾರ್ಮಿಕನೆಂದು ಗುರುತಿಸಲಾಗಿದೆ. ಎಂದಿನಂತೆ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆಮಿಕಲ್ ಲೀಕ್ ಆಗಿದೆ. ಪರಿಣಾಮ ರಂಗಡು ಎಂಬ ಕಾರ್ಮಿಕ ಮೂರ್ಛೆ ಬಂದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇನ್ನುಳಿದ ವೀರೇಶ್, ತಿಮ್ಮಪ್ಪ, ಶ್ರೀನಿವಾಸ್ ರೆಡ್ಡಿ ಎಂಬುವರ ಸ್ಥಿತಿ ಗಂಭೀರವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಫ್ಯಾಕ್ಟರಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.