ರಾಯಚೂರು: ತೆಲಂಗಾಣ ಮಾದರಿಯಂತೆ ರಾಜ್ಯದಲ್ಲಿಯೂ ಹೊಸ ಮರಳು ನೀತಿ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.
ರಾಜ್ಯದಲ್ಲಿ ಸಿಗುವ ಮರಳನ್ನ ತೆಲಂಗಾಣ ಮಾದರಿಯಲ್ಲಿ ವಿತರಿಸಲು ಚಿಂತನೆ ನಡೆದಿದ್ದು, ಇದಕ್ಕಾಗಿ ರಾಜ್ಯದಿಂದ ಅಧ್ಯಯನ ತಂಡವನ್ನ ಶೀಘ್ರದಲ್ಲಿ ಕಳುಹಿಸಲಾಗುವುದು. ಈಗಾಗಲೇ ಒಂದು ತಂಡ ಗುಜರಾತ್ಗೆ ತೆರಳಿದೆ ಎಂದರು. ಅಕ್ರಮ ಮರಳುಗಾರಿಕೆ ತಡೆಯಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಅಕ್ರಮ ಮರಳುಗಾರಿಕೆಗೆ ಬ್ರೇಕ್ ಹಾಕಲಾಗುವುದು. ರಾಯಚೂರು ಜಿಲ್ಲೆಯಲ್ಲಿನ ಅಕ್ರಮ ಮರಳುಗಾರಿಕೆ ತಡೆಗೂ ಕೂಡ ವಿಶೇಷ ತಂಡವನ್ನು ರಚಿಸಲಾಗುವುದು ಎಂದರು. ಅಲ್ಲದೇ ಹೊಸೂರಿನಿಂದ ಬರುತ್ತಿದ್ದ ಅಕ್ರಮ ಕಲ್ಲುಗಳನ್ನು ಈಗಾಗಲೇ ಗಣನೀಯ ಪ್ರಮಾಣದಲ್ಲಿ ತಡೆದಿದ್ದೇವೆ. ರಾಜ್ಯದಲ್ಲಿ ಅಕ್ರಮ ನಡೆಯದಂತೆ ನೋಡಿಕೊಳ್ಳಲಾಗುವುದು ಎಂದರು.