ರಾಯಚೂರು: ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಜಾಲವನ್ನು ದೇವದುರ್ಗ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪೊಲೀಸ್ ಕಾರ್ಯಾಚರಣೆಯಲ್ಲಿ 7 ಆರೋಪಿಗಳನ್ನು ಬಂಧಿಸಿದ್ದು, 58 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ತಲಾ 2 ಮಿನಿ ಲಾರಿ, ಬೊಲೊರೋ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಮಹಮ್ಮದ್ ಗೌಸ್, ಮಹಮ್ಮದ್ ಫರ್ವೇಜ್, ಆರಿಫ್, ಮೊಹಮ್ಮದ್ ಅಬೀಬ್, ಶೇಕ್ ಖಯೂಬ್, ನಿಸಾರ ಅಹ್ಮದ್ ಮತ್ತು ಮಹ್ಮದ್ ಅಸೀಫ್ ಬಂಧಿತರು. ಇವರು ಕಲಬುರ್ಗಿ ಮೂಲದವರು ಎಂದು ತಿಳಿದು ಬಂದಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವದುರ್ಗ ಪಟ್ಟಣದ ಹೊರವಲಯದ ಸಿರವಾರ ಕ್ರಾಸ್ ಹತ್ತಿರ ಜಾನುವಾರುಗಳನ್ನು ತುಂಬಿಕೊಂಡು ಕಲಬುರಗಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕಾಡಾನೆ ದಾಳಿಗೆ ಮಹಿಳೆ ಬಲಿ.. ಸ್ಥಳಕ್ಕೆ ಹೋದ ಶಾಸಕನ ಮೇಲೆ ಹಲ್ಲೆ ಮಾಡಿ ಅಂಗಿ ಹರಿದ್ರಾ ಗ್ರಾಮಸ್ಥರು!?