ETV Bharat / state

ಕಾಂಗ್ರೆಸ್​ನಲ್ಲಿ ವೈಮನಸ್ಸು ಶುರುವಾಗಿದೆ: ಶಾಸಕ ಬಿ ವೈ ವಿಜಯೇಂದ್ರ - Minister MB Patil

ಶಾಸಕ ಬಿ ವೈ ವಿಜಯೇಂದ್ರ ಹಾಗೂ ಸಚಿವ ಎಂ ಬಿ ಪಾಟೀಲ್, ರಂಭಾಪುರಿ ಪೀಠದ ಜಗದ್ಗುರುಗಳು ನಡೆಸುತ್ತಿರುವ ದಸರಾ ಧರ್ಮ ಸಮ್ಮೇಳದಲ್ಲಿ ಭಾಗವಹಿಸಿ, ಪರಸ್ಪರರ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

b y vijayendra statement on Congress
ರಂಭಾಪುರಿ ಪೀಠದ ಜಗದ್ಗುರುಗಳು ನಡೆಸುತ್ತಿರುವ ದಸರಾ ಧರ್ಮ ಸಮ್ಮೇಳನ
author img

By ETV Bharat Karnataka Team

Published : Oct 21, 2023, 11:06 AM IST

Updated : Oct 21, 2023, 11:22 AM IST

ಶಾಸಕ ಬಿ ವೈ ವಿಜಯೇಂದ್ರ ಹಾಗೂ ಸಚಿವ ಎಂ ಬಿ ಪಾಟೀಲ್ ಮಾತನಾಡಿರುವುದು

ರಾಯಚೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ಆಗಿಲ್ಲ. ಆಗಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರ ನಡುವೆ ವೈಮನಸ್ಸು ಶುರುವಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ರಂಭಾಪುರಿ ಪೀಠದ ಜಗದ್ಗುರುಗಳು ನಡೆಸುತ್ತಿರುವ ದಸರಾ ಧರ್ಮ ಸಮ್ಮೇಳದಲ್ಲಿ ಭಾಗವಹಿಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ವೈಮನಸ್ಸು ಹೆಚ್ಚಾಗಿದೆ. ಶಾಸಕ, ಸಚಿವರಲ್ಲಿಯೂ ಸಹ ಅಸಮಾಧಾನ ಇದೆ. ಸರ್ಕಾರ ಶಾಸಕರಿಗೆ ಒಂದು ರೂಪಾಯಿ ಅನುದಾನ ಕೊಡಲು ಸಾಧ್ಯವಾಗುತ್ತಿಲ್ಲ. ಎಲ್ಲದಕ್ಕೂ ಗ್ಯಾರೆಂಟಿ ಯೋಜನೆ ಕಾರಣ ಕೊಡುತ್ತಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿ ರೈತರು ಪರದಾಡುತ್ತಿದ್ದಾರೆ. ಬರಗಾಲದ ಪರಿಸ್ಥಿತಿ ತಾಂಡವಾಡುತ್ತಿದೆ. ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದೆ. ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹ ಈ ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ. ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ. ಬರಗಾಲ ಸಂದರ್ಭದಲ್ಲಿ ಕೂಡ ಹೀಗೆ ನಡೆದುಕೊಳ್ಳುತ್ತಿರುವುದು ದುರಾದೃಷ್ಟಕರ ಸಂಗತಿ. ಬರಗಾಲದಿಂದ ರಾಜ್ಯದ ಜನತೆ ನರಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಚಿವರುಗಳಿಗೆ ಹೊಸ ಕಾರ್ ಖರೀದಿ ಬೇಕೆ? ಎಂದು ಪ್ರಶ್ನಿಸಿದರು.

ಮಾಜಿ ಶಾಸಕಿ ಪೂರ್ಣಿಮಾ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಬಿಜೆಪಿ ಕಾರ್ಯಕರ್ತರ ಶಕ್ತಿ ಮೇಲೆ ನಿಂತಿರುವ ಪಕ್ಷ. ಯಾರೋ ಒಂದಿಬ್ಬರು ಮಾಜಿ ಶಾಸಕರು ಹೋದ್ರೆ ಪಕ್ಷಕ್ಕೆ ಹಿನ್ನೆಡೆ ಆಗಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನೆಡೆಯಾಗಿದೆ ಎನ್ನುವುದು ನಿಜ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ, ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಇನ್ನೂ ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಬಹಳ ದೊಡ್ಡ ಮೇಧಾವಿ. ಅವರ ಹೇಳಿಕೆಗಳಿಗೆ ನಾನು ಉತ್ತರಿಸುವುದಿಲ್ಲ ಎಂದು ವ್ಯಂಗ್ಯವಾಡಿದರು. ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ವಿರುದ್ಧ ಇರುವ ಆರೋಪಗಳಿಗೆ ಪ್ರತಿಕ್ರಿಯಿಸಿ, ಅವರು ಪರಿಶುದ್ಧ ವ್ಯಕ್ತಿ. ಬದ್ಧತೆ ಹೊಂದಿದ್ದಾರೆ. ಈ ಪ್ರಕರಣವನ್ನು ಸಿಐಡಿಗೆ ವಹಿಸುವುದು ಅವಶ್ಯವಿರಲಿಲ್ಲ. ಆದರೂ ನಮ್ಮ ಸರ್ಕಾರ ಸಿಐಡಿ ತನಿಖೆಗೆ ನೀಡಿದೆ. ಈಶ್ವರಪ್ಪನವರ ಕೇಸ್ ಬೇರೆ, ಸಚಿವ ಶರಣಪ್ರಕಾಶ್ ಪಾಟೀಲ್ ಅವರ ಕೇಸ್ ಬೇರೆ. ಶರಣಪ್ರಕಾಶ್ ಪಾಟೀಲ್ ಪ್ರಾಮಾಣಿಕ ನಾಯಕ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Gaganyaan: ಗಗನಯಾನ ಯೋಜನೆಯ ಮೊದಲ ಹಂತದ ಪರೀಕ್ಷಾರ್ಥ ಪರೀಕ್ಷೆ ಯಶಸ್ವಿ.. ಸುರಕ್ಷಿತವಾಗಿ ಭೂಮಿಗೆ ಬಂದಿಳಿದ ಕ್ರ್ಯೂ ಮಾಡ್ಯೂಲ್​

ಕಾಂಗ್ರೆಸ್​ ವಿಚಾರಗಳ ಬಗ್ಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ, ಹಿರಿಯ ನಾಯಕಿ ಸೋನಿಯಾಗಾಂಧಿ, ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಯಾವ ಕಾಲದಲ್ಲಿ ಏನು ಆಗಬೇಕು ಎಂದು ಅವರೇ ನಿರ್ಧರಿಸುತ್ತಾರೆ ಎಂದರು. ಲೋಕಸಭಾ ಚುನಾವಣೆಗೂ ಮುನ್ನ ಸರ್ಕಾರ ಬೀಳುತ್ತದೆ ಎಂದು ವ್ಯಂಗ್ಯವಾಡಿರುವ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯಲ್ಲಿ ಇರುವ ನಾಯಕರೇ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಲೋಕಸಭಾ ಚುನಾವಣೆವರೆಗೂ ಈಶ್ವರಪ್ಪನವರು ನೋಡಲಿ. ಈಶ್ವರಪ್ಪ ಸಹ ಕಾಂಗ್ರೆಸ್ ಸೇರಿದ್ರೆ ಅಚ್ಚರಿ ಪಡಬೇಕಾಗಿಲ್ಲ. ಆದ್ರೆ ಸೇರಿಸಿಕೊಳ್ಳುವ ಬಗ್ಗೆ ವಿಚಾರ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಒಕ್ಕಲಿಗರ ವಿರುದ್ಧ ವಿವಾದಾತ್ಮಕ ಹೇಳಿಕೆ ಆರೋಪ.. ಪ್ರೊ. ಕೆ ಎಸ್ ಭಗವಾನ್ ವಿರುದ್ಧ ಎಫ್​ಐಆರ್​

ಬಿಜೆಪಿಯಿಂದ ಕಾಂಗ್ರೆಸ್ ವಿರುದ್ಧ ಪೋಸ್ಟರ್ ಅಭಿಯಾನದ ಬಗ್ಗೆ ಮಾತನಾಡಿ, ಗುತ್ತಿಗೆದಾರರ ಮೇಲೆ ಐಟಿ ದಾಳಿ ಆಗುವುದು ಸಾಮಾನ್ಯವಾಗಿದೆ. ಹಿಂದಿನ ಸರ್ಕಾರದಲ್ಲಿ ಆಗಿದೆ, ಈಗಲೂ ಆಗುತ್ತಿದೆ. ಗುತ್ತಿಗೆದಾರನ ಮೇಲೆ ರೇಡ್​ ಆಗಿದ್ದಕ್ಕೂ ಕಾಂಗ್ರೆಸ್​ಗೂ ಸಂಬಂಧವಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ನಾವು ಟೆಂಡರ್ಸ್ ಕರೆದಿಲ್ಲ. ಬಿಜೆಪಿ ಅವರು ಆಪಾದನೆ ಮಾಡಿದ್ರೆ, ನಾವೂ ಆಪಾದನೆ ಮಾಡುತ್ತೇವೆ. ಬಿಜೆಪಿಯ ಶೇ. 40ರಷ್ಟು ಕಮಿಷನ್ ಚುನಾವಣೆ ವೇಳೆ ಹೊರಬರುತ್ತಿದೆ. ಎಲ್ಲಾ ಪಕ್ಷದ ಕಡೆಯೂ ಗುತ್ತಿಗೆದಾರರಿರುತ್ತಾರೆ. ಒಂದೇ ಪಕ್ಷಕ್ಕೆ ಸೀಮಿತವಲ್ಲ ಎಂದು ಸಚಿವ ಎಂ ಬಿ ಪಾಟೀಲ್​ ತಿಳಿಸಿದರು.

Last Updated : Oct 21, 2023, 11:22 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.