ETV Bharat / state

ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆ - ಕೃಷ್ಣ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕ

ಎರಡು ದಿನದ ಹಿಂದೆ ಕೃಷ್ಣ ನದಿ ಪ್ರವಾಹಕ್ಕೆ ಸಿಲುಕಿ ಸಂತೋಷ್​ ಎಂಬಾತ ಕೊಚ್ಚಿ ಹೋಗಿದ್ದು, ಇಂದು ಆತನ ಮೃತದೇಹ ಮುದುಗೋಟ ಗ್ರಾಮದ ಬಳಿ ಪತ್ತೆಯಾಗಿದೆ.

ಕೃಷ್ಣ ನದಿ ತೀರದಲ್ಲಿ ಪತ್ತೆಯಾದ ಮೃತದೇಹ
author img

By

Published : Oct 23, 2019, 3:16 PM IST

ರಾಯಚೂರು: ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಚಿಂಚೋಡಿ ಗ್ರಾಮದ ಯುವಕ ಸಂತೋಷನ ಮೃತದೇಹ ಪತ್ತೆಯಾಗಿದೆ.

ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಮುದುಗೋಟದ ಕೃಷ್ಣ ನದಿ ತೀರದಲ್ಲಿ ಮೃತದೇಹ ಪತ್ತೆಯಾಗಿದೆ. ಚಿಂಚೋಡಿ ಗ್ರಾಮದ ನದಿ ತೀರದಲ್ಲಿ ದನ ಕಾಯಲು ಸಂತೋಷ ಸೇರಿದಂತೆ ನಾಲ್ವರ ಎರಡು ದಿನದ ಹಿಂದೆ ತೆರಳಿದ್ರು. ನದಿಗೆ ನೀರು ಹರಿದು ಬಂದ ಹಿನ್ನೆಲೆ ಪ್ರವಾಹಕ್ಕೆ ಸಂತೋಷ್​ ಕೊಚ್ಚಿ ಹೋಗಿದ್ದ.

ಕೃಷ್ಣ ನದಿ ತೀರದಲ್ಲಿ ಪತ್ತೆಯಾದ ಮೃತದೇಹ

ಮೃತದೇಹಕ್ಕಾಗಿ ಅಗ್ನಿಶಾಮಕದಳದ ಸಿಬ್ಬಂದಿ ಬೋಟ್ ಸಹಾಯದಿಂದ ಶೋಧ ಕಾರ್ಯ ನಡೆಸಿದ್ದರೂ ಶವ ಪತ್ತೆಯಾಗಿರಲಿಲ್ಲ. ನಿನ್ನೆ ರಾತ್ರಿ ವೇಳೆ ಮುದುಗೋಟ ಗ್ರಾಮದ ಬಳಿ ಹೆಣ ಪತ್ತೆಯಾಗಿದ್ದು, ಇಂದು ಯುವಕನ ದೇಹವನ್ನು ನದಿಯಿಂದ ಹೊರ ತೆಗೆಯಲಾಗಿದೆ.

Intro:ಸ್ಲಗ: ನದಿಯಲ್ಲಿ ಕೊಚ್ಚಿ ಹೋದ ಯುವಕನ ಶವ ಪತ್ತೆ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೨೩-೧೦-೨೦೧೯
ಸ್ಥಳ: ರಾಯಚೂರು

ಆಂಕರ್: ಕೃಷ್ಣ ಪ್ರವಾಹ ಕೊಚ್ಚಿ ಹೋದ ಚಿಂಚೋಡಿ ಗ್ರಾಮದ ಯುವಕ ಸಂತೋಷನ ಮೃತದೇಹ ಪತ್ತೆಯಾಗಿದೆ. Body:ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಹತ್ತಿರ ಬರುವ ಮುದುಗೋಟ ಗ್ರಾಮದ ಕೃಷ್ಣ ನದಿ ತೀರದಲ್ಲಿ ಪತ್ತೆಯಾಗಿದೆ. ಚಿಂಚೋಡಿ ಗ್ರಾಮದ ನದಿ ತೀರದಲ್ಲಿ ಬರುವ ನಡುಗಡ್ಡೆ ಪ್ರದೇಶಕ್ಕೆ ದನ ಕಾಯಲು ಸಂತೋಷ ಸೇರಿದಂತೆ ನಾಲ್ವರ ತೆರಳಿದ್ರು. ನದಿಗೆ ನೀರು ಹರಿದು ಬರುತ್ತಿರುವ ಎಂದು ವಾಪಾಸ್ ದನ ಬಾಲವನ್ನ ಹಿಡಿದುಕೊಂಡು ಬರುವಾಗ ಆಕಸ್ಮಿಕವಾಗಿ ಪ್ರವಾಹಕ್ಕೆ ಕಳೆದ ಎರಡು ದಿನಗಳಿಂದ ಕೊಚ್ಚಿಕೊಂಡು ಹೋಗಿದ್ದ. ಆಗ ದೇಹವನ್ನ ಅಗ್ನಿಶಾಮಕ ಸಿಬ್ಬಂದಿಗಳು ಬೋಟ್ ಸಹಾಯದಿಂದ ಶೋಧ ಕರೆ ನಡೆಸಿದ್ರು. ಪತ್ತೆಯಾಗಿರಲ್ಲಿ. ನಿನ್ನೆ ರಾತ್ರಿ ವೇಳೆ ಮುದುಗೋಟ ಗ್ರಾಮದಲ್ಲಿ ಪತ್ತೆಯಾಗಿದ್ದು, ಇಂದು ಯುವಕನ ದೇಹವನ್ನ ನದಿಯಿಂದ ಹೊರ ತೆಗೆಯಲು‌ ಆಗಿದೆ. ಮಗನನ್ನು ಕಳೆದುಕೊಂಡ ಪೊಷಕರು ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ನೀರಾವ ಮೌನ ಆವರಿಸಿತ್ತು. Conclusion:ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು‌ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.