ರಾಯಚೂರು: ನಮ್ಮ ಮೈಯಲ್ಲಿ ಹರಿಯುತ್ತಿರುವುದು ಸಂಗೊಳ್ಳಿ ರಾಯಣ್ಣ, ಕನಕದಾಸರ ರಕ್ತವೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಒದಗಿಸುವಂತೆ ಆಗ್ರಹಿಸಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಹೇಳಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಒದಗಿಸುವಂತೆ ಆಗ್ರಹಿಸಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕುರುಬರಿಗೆ ಎಸ್ಟಿ ಮೀಸಲಾತಿ ಒದಗಿಸುವಂತೆ ಹಲವು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕುರುಬರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಎಷ್ಟೋ ಕುರುಬರಿಗೆ ಸ್ವಂತ ಮನೆಗಳಿಲ್ಲ. ತಂದೆಯಂತೆ ಮಗ ಸಹ ಕೂಲಿ ಆಗಬಾರದು. ಚುನಾವಣೆಯಲ್ಲಿ ನಾನು ಮತ್ತು ಸಿದ್ದರಾಮಯ್ಯ ಬಾಯಿಗೆ ಬಂದಂತೆ ಬೈದಾಡಿಕೊಳ್ಳುತ್ತೇವೆ. ಅದು ಪಕ್ಷದ ನಿಷ್ಠೆಗಾಗಿ ನಾವು ಜಗಳ ಆಡುತ್ತೇವೆ. ಉಪ್ಪಾರ, ಕೂಳಿ ಸಮಾಜ ಯಾರಿಗೆ ಅರ್ಹತೆ ಇದೆ, ಅವರಿಗೆ ಎಸ್ಟಿ ಮೀಸಲಾತಿ ಕೊಡಿ. ಕುರುಬ ಸಮಾಜಕ್ಕೆ ಅರ್ಹತೆಯಿದೆ ಎಂದರು.
ಓದಿ:14ರಿಂದ ಕಾಗಿನೆಲೆಯಿಂದ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ : ಕೆ ಎಸ್ ಈಶ್ವರಪ್ಪ
ಸಮಾವೇಶದಲ್ಲಿ ಮಾತನಾಡಿದ ಕುರುಬ ಎಸ್ಟಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಈಗ ಬೀದಿಯಲ್ಲಿ ಹೋರಾಟ ಮಾಡುವಂತೆ ಮಾಡಿದ್ದು ನಮ್ಮಿಂದ ಆಯ್ಕೆಯಾದ ನಾಯಕರು. ಅವರೇನು ಕತ್ತೆ ಕಾಯುತ್ತಿದ್ರಾ ? ಈಗ ಏನೇನೋ ಮಾತನಾಡುತ್ತಿದ್ದಾರೆ. ಅವರ ಹೆಸರು ಹೇಳಿದರೆ ಹೋ ಎನ್ನುತ್ತೀರಿ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹೆಸರು ಹೇಳದೆ ಅವರನ್ನು ಟೀಕಿಸಿದರು. ಪ್ರವರ್ಗ ಎ ಮೀಸಲಾತಿ ನೀಡದವರು ನಮಗೆ ಎಸ್ಟಿ ಮೀಸಲಾತಿ ನೀಡುತ್ತೀರಾ. ಮೈಸೂರು ಭಾಗದವರಿಗೆ ಹೊಟ್ಟೆ ತುಂಬಿದೆ ಎನ್ನುತ್ತಾ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ್ರು.