ETV Bharat / state

ಕಾಂಗ್ರೆಸ್​​ ಪಕ್ಷದ ಕುಟುಂಬ ರಾಜಕಾರಣ ಪ್ರಾದೇಶಿಕ ಪಕ್ಷಗಳಿಗೂ ಅಂಟಿದೆ: ಸಿ.ಟಿ.ರವಿ

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು.

ವಿಜಯ ಸಂಕಲ್ಪ ಯಾತ್ರೆ
ವಿಜಯ ಸಂಕಲ್ಪ ಯಾತ್ರೆ
author img

By

Published : Mar 10, 2023, 8:03 AM IST

Updated : Mar 10, 2023, 10:36 AM IST

ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಿ.ಟಿ.ರವಿ

ರಾಯಚೂರು: ಕುಟುಂಬದಿಂದ ಕುಟುಂಬಕ್ಕಾಗಿ ಇರುವ ಪಕ್ಷ ಜೆಡಿಎಸ್​ ಎಂದು ಶಾಸಕ ಸಿ.ಟಿ.ರವಿ ಜಾಲಹಳ್ಳಿಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಹೇಳಿದರು. ಗುರುವಾರ ಸಂಜೆ ಇಲ್ಲಿ ರೋಡ್ ಶೋ ನಂತರ ಸಮಾವೇಶ ನಡೆಯಿತು. ಈ ಸಂದರ್ಭದಲ್ಲಿ ಸಿ.ಟಿ.ರವಿ ಮಾತನಾಡಿ, "ಪ್ರಜಾಪ್ರಭುತ್ವ ಎಂದರೆ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎಂದು ಸಂವಿಧಾನದಲ್ಲಿದೆ. ಆದರೆ ಕೆಲವು ರಾಜಕೀಯ ಪಕ್ಷಗಳು ಇದನ್ನು ತಪ್ಪಾಗಿ ಅಳವಡಿಸಿಕೊಂಡಿವೆ. ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಗೋಸ್ಕರ ಎಂದು ಬದಲಾವಣೆ ಮಾಡಿಕೊಂಡಿವೆ. ಮೊದಲಿಗೆ ಕಾಂಗ್ರೆಸ್​ಗೆ ಅಂಟಿದ ಚಾಳಿ ಇಂದು ದೇಶದಲ್ಲಿರುವ ಬಹುತೇಕ ಪ್ರಾದೇಶಿಕ ಪಕ್ಷಗಳಿಗೂ ಅಂಟಿಕೊಂಡಿದೆ, ಅದರಲ್ಲಿ ಜೆಡಿಎಸ್​ ಕೂಡ ಒಂದು" ಎಂದರು.

"ಜೆಡಿಎಸ್​ನಲ್ಲಿ ದೊಡ್ಡಗೌಡರು​ ಆದನಂತರ ಸಣ್ಣಗೌಡರು ಅವರ ನಂತರ ಮರಿಗೌಡರು. ಜೆಡಿಎಸ್​ ಪ್ರಕಾರ ಪ್ರಜಾಪ್ರಭುತ್ವ ಎಂದರೆ ಕುಟಂಬದಿಂದ, ಕುಟುಂಬಕ್ಕಾಗಿ, ಕುಟುಂಬಗೋಸ್ಕರ ಆಗಿದೆ. ಆದರೆ ಪ್ರಜಾಪ್ರಭುತ್ವದ ಆಶಯ ಇದಲ್ಲ. ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವುದೇ ಪ್ರಜಾಪ್ರಭುತ್ವದ ಆಶಯ. ಅದರಂತೆ ಪ್ರಧಾನಿ ಮೋದಿಯವರು ದೇಶದ ಹಿತಕ್ಕಾಗಿ ಮತ್ತು ಜನಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ದೇಶ ಮೊದಲು ಎನ್ನುವ ತತ್ವ ಅಳವಡಿಸಿಕೊಂಡು ಜನರಿಗಾಗಿ ಕೆಲಸ ಮಾಡುತ್ತಿದೆ" ಎಂದು ಹೇಳಿದರು.

ಈ ಬಾರಿಯ ಚುನಾವಣೆಯಲ್ಲಿ ದೇವದುರ್ಗ ವಿಧಾನಸಭಾ ಕ್ಷೇತ್ರದಿಂದ 50 ಸಾವಿರಕ್ಕೂ ಹೆಚ್ಚು ಅಂತರದ ಮತಗಳಿಂದ ಶಿವನಗೌಡ ನಾಯಕರನ್ನು ಗೆಲ್ಲಿಸಿ ಎಂದು ಇದೇ ವೇಳೆ ಮನವಿ ಮಾಡಿದರು. ಸಚಿವ ಬಿ.ಶ್ರೀರಾಮುಲು ಮಾತನಾಡಿ, "19 ವಿಧಾನಸಭಾ ಕ್ಷೇತ್ರ ಮುಗಿಸಿ ಯಾತ್ರೆ 20ನೇ ವಿಧಾನಸಭಾ ಕ್ಷೇತ್ರದಲ್ಲಿ ಶುರುವಾಗಿದೆ. ಬಿಜೆಪಿ ಅಲೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ದೂಳೀಪಟವಾಗುತ್ತೆ. 2023ರ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಬೇಕಾಗಿದೆ. ಕೆ.ಶಿವನಗೌಡ ನಾಯಕರನ್ನು 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು. ಎಲ್ಲಾ ಪಕ್ಷದ ನಾಯಕರು ದೇವದುರ್ಗದ ಮೇಲೆ ಕಣ್ಣು ಹಾಕಿದ್ದಾರೆ. ಇಡೀ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲಿ ಅಭಿವೃದ್ಧಿಹೊಂದಿದ ಕೇತ್ರಗಳ ಪೈಕಿ ದೇವದುರ್ಗ 2ನೇ ಸ್ಥಾನದಲ್ಲಿದೆ. ನವಕರ್ನಾಟಕ, ನವಭಾರತ ನಿರ್ಮಾಣ ಮಾಡಲು ಬಿಜೆಪಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಕಲ್ಯಾಣ ಕರ್ನಾಟಕಕ್ಕೆ ಸಿಎಂ, 5 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ. ಎಸ್​ಸಿ ಮತ್ತು ಎಸ್​ಟಿ ಜನಾಂಗಕ್ಕೆ ಯಾರೂ ಮೀಸಲಾತಿ ನೀಡಲಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಮೀಸಲಾತಿ ಸಿಕ್ಕಿದೆ ಎಂದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ಇಂದು ಪ್ರಧಾನಿ ಮೋದಿಯವರನ್ನು ನಮ್ಮ ದೇಶ ಮಾತ್ರವಲ್ಲದೇ ಇಡೀ ಜಗತ್ತೇ ಕೊಂಡಾಡುತ್ತಿದೆ. ಇಡೀ ಜಗತ್ತಿನ ಜನಪ್ರಿಯ ವ್ಯಕ್ತಿ ಮೋದಿ. ಶ್ರೀಲಂಕಾ ಮತ್ತು ಪಾಕಿಸ್ತಾನನಲ್ಲಿ ಆರ್ಥಿಕತೆ ನೆಲಕ್ಕಚ್ಚಿದೆ. ಮೋದಿ ನಾಯಕತ್ವದ ಬಗ್ಗೆ ಪಾಕಿಸ್ತಾನದ ಪ್ರಜೆಗಳು ಕೊಂಡಾಡುವಂತಾಗಿದೆ. ಬದಲಾವಣೆಯತ್ತ ರಾಜ್ಯ ಹೊರಟಿದೆ, ಇದಕ್ಕೆ ಕಾರಣವೇ ಡಬಲ್ ಎಂಜಿನ್ ಸರ್ಕಾರ. ಕರ್ನಾಟಕದಲ್ಲಿ ಕಾಂಗ್ರೆಸ್ ಐಸಿಯುನಲ್ಲಿ ಇದ್ದು ಈಗಾಗಲೇ ಡಿಕೆಶಿ ಮತ್ತು ಸಿದ್ದರಾಮಯ್ಯ ಸಿಎಂ ಆಗಲು ಸೂಟ್ ಹೊಲಿಸಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಳಿಕ ಜೆಡಿಎಸ್​ ವಿರುದ್ದ ಟೀಕಾಪ್ರಹಾರ ನಡೆಸಿದ ಶಾಸಕ ಕೆ.ಶಿವನಗೌಡ ನಾಯಕ್​, ಮಾಜಿ ಸಿಎಂ ಕುಮಾರಸ್ವಾಮಿ ಅವರ ಕುಟುಂಬದಲ್ಲೇ ಗೊಂದಲಗಳಿವೆ. ರೇವಣ್ಣ ಪತ್ನಿಗೆ ಟಿಕೆಟ್ ನೀಡುವುದಕ್ಕೆ ಮನಸ್ಸು ಇಲ್ಲ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಒಂದು ಕಡೆ ಮಗ ಸೋತರೆ, ಮತ್ತೊಂದು ಕಡೆ ತಂದೆ ಸೋತರು. ಆದರೆ ಇಲ್ಲಿ ಬಂದು ಶಾಸಕ ಶಿವನಗೌಡರಿಗೆ ಸೋಲಿಸಲು ಜನರಿಗೆ ಕರೆ ನೀಡುತ್ತೀರಿ. ನಿಮ್ಮ ಶಕ್ತಿಯನ್ನು ಈ ಕ್ಷೇತ್ರದಲ್ಲಿ ಸಾಬೀತುಪಡಿಸಿ ತೋರಿಸಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಪ್ರತಿಪಕ್ಷವಾಗಿ ಸಂಘಟಿತವಾಗಿ ಕೆಲಸ ಮಾಡದ ಕಾರಣ ಪಕ್ಷಕ್ಕೆ ರಾಜೀನಾಮೆ :ತೀ ನಾ ಶ್ರೀನಿವಾಸ್

Last Updated : Mar 10, 2023, 10:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.