ರಾಯಚೂರು: ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ರೆ ನಾನು ಒಂದು ಕಡೆಯ ಮೀಸೆ ಬೋಳಿಸುವುದಾಗಿ ಜಿಲ್ಲೆಯ ದೇವದುರ್ಗ ಕ್ಷೇತ್ರದ ಶಾಸಕ ಶಿವನಗೌಡ ನಾಯಕ ಬಹಿರಂಗ ಸವಾಲು ಹಾಕಿದ್ದಾರೆ.
ಅ.11ರಂದು ಗಿಲ್ಲೆಸೂಗೂರಿನಲ್ಲಿ ನಡೆಯಲಿರುವ ಜನಸಂಕಲ್ಪ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಹಗಲುಗನಸು ಕಾಣುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಏಳು ಸೀಟ್ನಲ್ಲಿ ಏಳಕ್ಕೆ ಏಳು ಗೆದ್ದು ಬಿಡ್ತೀವಿ ಅಂತಾರೆ. ಆದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮೂರು ಸೀಟ್ ಗೆದ್ದರೆ, ನಾನು ಒಂದು ಕಡೆಯ ಮೀಸೆ ಬೋಳಿಸಿಕೊಳ್ಳುತ್ತೇನೆ ಎಂದು ಕೈ ನಾಯಕರಿಗೆ ಸವಾಲು ಹಾಕಿದರು.
ಕಾಂಗ್ರೆಸ್ ಏಳಕ್ಕೆ ಏಳು ಸೀಟ್ ಗೆಲ್ಲುವುದು ಅಸಾಧ್ಯವಾದ ಮಾತು. ನಮ್ಮ ಜಿಲ್ಲೆಯಲ್ಲಿ ಕನಿಷ್ಠ 5 ಸೀಟ್ ನಾವು ಗೆದ್ದೇ ಗೆಲ್ಲುತ್ತೇವೆ. ಇದು ನಮ್ಮ ವಚನವಾಗಿದೆ. ಏಳು ಕ್ಷೇತ್ರದಲ್ಲಿ ಓಡಾಡಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸಲು ಸಿದ್ಧನಿದ್ದೇನೆ. ಪರ್ಯಾಯ ಅಭ್ಯರ್ಥಿ ಕೊಟ್ಟು ನೀವು ನಿಲ್ಲೋದು ಬೇಡ ಅಂದ್ರು ಸರಿ. ನನಗೆ ಅಧಿಕಾರಿ ಬೇಡ. ಏಳು ಕ್ಷೇತ್ರಗಳ ಚುನಾವಣೆ ಮಾಡು ಅಂದ್ರೆ ನಾನು ಮಾಡುತ್ತೇನೆ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ ಎಂದರು.
ಇದನ್ನೂ ಓದಿ: ದೇವದುರ್ಗ ಬೈಪಾಸ್ ರಸ್ತೆಗೆ ಪ್ರಸ್ತಾವನೆ ಸಲ್ಲಿಸುವಂತೆ ಶಿವನಗೌಡ ನಾಯಕ ಸೂಚನೆ