ರಾಯಚೂರು: ಸಿರವಾರ ತಾಲೂಕಿನ ನವಲಕಲ್ ಗ್ರಾಮದ ಹೊರವಲಯದ ಜಮೀನಿನಲ್ಲಿ ಕರಡಿ ಕಾಣಿಸಿಕೊಂಡಿದ್ದು ಸುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಭತ್ತದ ಗದ್ದೆಯಲ್ಲಿ ವ್ಯಕ್ತಿಯೋರ್ವ ಮೇವು ತರಲು ತೆರಳಿದಾಗ ಟ್ರ್ಯಾಕ್ಟರ್ ಶಬ್ದಕ್ಕೆ ಕರಡಿ ಓಡಿ ಹೋಗಿದೆ. ಈ ವೇಳೆ ಜನರು ಕಿರುಚಿದ್ದಾರೆ. ಪರಿಣಾಮ, ಕರಡಿ ಅಲ್ಲಿಂದ ಕಾಲ್ಕಿತ್ತಿದೆ. ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.