ETV Bharat / state

ಬಿಜೆಪಿ ಮತ್ತು ಕಾಂಗ್ರೆಸ್​ನ​ವರ ಯಾತ್ರೆ ವಿರುದ್ಧ ವಾಗ್ದಾಳಿ :ನಿಖಿಲ್ ಕುಮಾರಸ್ವಾಮಿ

author img

By

Published : Jan 5, 2023, 9:22 PM IST

ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ದ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ -ಭಾರತ್ ಜೋಡೋ ಯಾತ್ರೆಯಲ್ಲ ಬದಲಾಗಿ ಕಾಂಗ್ರೆಸ್ ನಾಯಕರ ಜೋಡೋ ಯಾತ್ರೆಯಾಗಿತ್ತು -ರಾಜ್ಯದ ಜನರ ಬೊಕ್ಕಸದ ಹಣವನ್ನು ಲೂಟಿ ಹೊಡೆಯಲು ಜನ ಸಂಕಲ್ಪ ಯಾತ್ರೆ ಮಾಡುತ್ತೀರಾ?

JDS youth leader Nikhil Kumaraswamy
ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ
ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ದ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ರಾಯಚೂರು : ಬಿಜೆಪಿ(ಭಾರತೀಯ ಜನತಾ ಪಕ್ಷ) ಮತ್ತು ಕಾಂಗ್ರೆಸ್​ನ​ವರು ಯಾವ ಪುರುಷಾರ್ಥಕ್ಕೆ ರಾಜ್ಯದಲ್ಲಿ ಯಾತ್ರೆ ಮಾಡುತ್ತಿದ್ದೀರಿ ಎಂದು ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದಲ್ಲಿ ಶಾಸಕ ನಾಡಗೌಡ ಅವರ ಜನ್ಮ ದಿನಾಚರಣೆ ನಿಮಿತ್ತವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.

ಬಿಜೆಪಿ ನಾಯಕರ ಜನ ಸಂಕಲ್ಪ ಯಾತ್ರೆಯನ್ನು ಮಾಡಿದ್ದೀರಿ. ಯಾವ ಪುರುಷಾರ್ಥಕ್ಕೆ ಜನ ಸಂಕಲ್ಪ ಯಾತ್ರೆ ಮಾಡುತ್ತಿದ್ದೀರಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಶೇ. 40 ಪೆರ್ಸೆಂಟ್ ಲೂಟಿ ಹೊಡೆಯುತ್ತಿದ್ದೀರ. ರಾಜ್ಯದ ಜನರ ಬೊಕ್ಕಸದ ಹಣವನ್ನು ಲೂಟಿ ಹೊಡೆಯಲು ಜನ ಸಂಕಲ್ಪ ಯಾತ್ರೆ ಮಾಡುತ್ತೀರಾ? ಎಂದು ನಿಖಿಲ್​ ಕುಮಾರಸ್ವಾಮಿ ಪ್ರಶ್ನಿಸಿದರು.

ಕಾಂಗ್ರೆಸ್​ ಜೋಡೋ ಯಾತ್ರೆಗೂ ಟಾಂಗ್​.. ಕಾಂಗ್ರೆಸ್​ನ ವಯನಾಡ್​ ಸಂಸದ ರಾಹುಲ್​ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಕನ್ಯಾಕುಮಾರಿಯಿಂದ ಕಾಸ್ಮೀರದವರೆಗೆ ಅವರು ನಡೆಸುತ್ತಿರುವ ಯಾತ್ರೆಯನ್ನು ನೀವು ನೋಡಿದ್ದೀರಿ. ಅದು ಭಾರತ್ ಜೋಡೋ ಯಾತ್ರೆಯಲ್ಲ, ಬದಲಾಗಿ ಕಾಂಗ್ರೆಸ್ ನಾಯಕರ ಜೋಡೋ ಯಾತ್ರೆಯಾಗಿದೆ. ರಾಜ್ಯದಲ್ಲಿ ಯಾವ ಜೋಡೋನೂ ಆಗುವುದಿಲ್ಲ. ಅದೇ ರೀತಿ ಬಿಜೆಪಿಯ ಯಾವ ಸಂಕಲ್ಪವೂ ನಡೆಯುವುದಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಹೆಚ್ಚಾಗಿ ಆಡಳಿತ ನಡೆಸಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲವೆಂದು ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ್ಷರು ಆರೋಪಿಸಿದರು.

ಆದರೆ ಕುಮಾರಣ್ಣ 34 ತಿಂಗಳಲ್ಲಿ ನೀಡಿದ ಕಾರ್ಯಕ್ರಮದ ಬಗ್ಗೆ ರಾಜ್ಯದ ಜನರು ಇವತ್ತು ಚರ್ಚೆ ಮಾಡುತ್ತಾರೆ. 4 ವರ್ಷದಲ್ಲಿ ಏನು ಮಾಡದವರು ಮುಂದಿನ ಐದು ವರ್ಷದಲ್ಲಿ ಬಿಜೆಪಿಯವರು ಮಾಡುತ್ತಾರಾ?, ಕುಮಾರಣ್ಣ ರೈತರ ಸಾಲ ಮನ್ನಾ ಮಾಡಿ ಈಗ ಪಂಚರತ್ನ ರೂಪಿಸಿದ್ದಾರೆ. ಈ ಕಾರ್ಯಕ್ರಮ ಎಲ್ಲರಿಗೂ ಅನುಕೂಲವಾಗಲಿದೆ ಎಂದು ನಿಖಿಲ್​ ಕುಮಾರಸ್ವಾಮಿ ಹೇಳಿದರು.

ಅಮಿತ್​ ಶಾ ಗೆ ಟಾಂಗ್​.. ಮಂಡ್ಯಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಭೇಟಿ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ನಿಖಿಲ್​ ಕುಮಾರಸ್ಚಾಮಿ, ಹೆಚ್.ಡಿ. ದೇವೇಗೌಡರನ್ನ ಆಗಲಿ, ಕುಮಾರಣ್ಣನನ್ನ ಆಗಲಿ, ಅಥವಾ ಜೆಡಿಎಸ್ ಪಕ್ಷವನ್ನು ಹಳೇ ಮೈಸೂರು ಭಾಗದಲ್ಲಿ ಬೇರೆ ಯಾವುದೇ ಪಕ್ಷದ ನಾಯಕರು ಬಂದ್ರು ಸಹ ನಮ್ಮ ಪಕ್ಷವನ್ನು ಅಲ್ಲಾಡಿಸಲು ಸಾಧ್ಯವಿಲ್ಲವೆಂದರು. ಇಂದಿನಿಂದ ಕುಮಾರ ಅಣ್ಣ ಬೀದರ್ ನಿಂದ ಎರಡನೇ ಹಂತದ ಪಂಚರತ್ನ ರಥ ಯಾತ್ರೆ ಶುರು ಮಾಡಿದ್ದಾರೆ. ಎಲ್ಲೆಡೆಯೂ ಎರಡು ರಾಷ್ಟ್ರೀಯ ಪಕ್ಷಗಳಿಗೆ ಧಿಕ್ಕರಿಸಿ. ಈ ಬಾರಿ ಕುಮಾರಣ್ಣ ನಾಯಕತ್ವಕ್ಕೆ ಬೆಂಬಲಿಸುವ ಮಾತುಗಳು ಕೇಳಿಬರುತ್ತಿವೆ. ಎರಡು ಪಕ್ಷಗಳ ಬಗ್ಗೆ ನಾವು ಮಾತನಾಡಲು ಸಿದ್ಧರಿಲ್ಲ ಎಂದರು.

ಸಿಂಧನೂರಿನಲ್ಲಿ ನಗರಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿರುವೆ. ಉತ್ಸಾಹದಿಂದ ಸಿಂಧನೂರು ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಯಿತು. ಮೆರವಣಿಗೆ ಮಾರ್ಗಮಧ್ಯ ಬರುವ ಕೋರ್ಟ್ ಸರ್ಕಲ್ ನಲ್ಲಿ ನಿಖಿಲ್ ಕುಮಾರಸ್ವಾಮಿಗೆ ಬೃಹತ್ ಹಾರ ಹಾಕಿ, ಜೆಸಿಬಿ ಮೂಲಕ ಪುಷ್ಪ ವೃಷ್ಟಿ ಮಾಡಿ ಕಾರ್ಯಕರ್ತರು ಅಭಿಮಾನ ಮೆರೆದರು. ಬೈಕ್ ರ್ಯಾಲಿ ತೆರೆದ ವಾಹನದಲ್ಲಿ ಕಮ್ಮಾವಾರಿ ಕಲ್ಯಾಣ ಮಂಟಪಕ್ಕೆ ಆಗಮಿಸುವ ವೇಳೆ ಮೆರವಣಿಗೆ ನಡೆಸಲಾಯಿತು.

ಈ ವೇಳೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಶಾಸಕ ವೆಂಕಟರಾವ್ ನಾಡಗೌಡ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಸಾಥ್ ನೀಡಿದರು. ನಾಡಗೌಡ ಅವರ ಜನ್ಮ ದಿನಾಚರಣೆಯ ವೇಳೆ ನಿಖಿಲ್ ಕುಮಾರಸ್ವಾಮಿಗೆ ಅಭಿಮಾನಿಯೊಬ್ಬರು ಕಂಬಳಿ ಹಾಕಿ, ಕುರಿಯನ್ನು ಉಡುಗರೆ ನೀಡಿದರು. ಈಗಾಗಲೇ ರಾಜ್ಯಾದ್ಯಂತ ಕೈಗೊಂಡಿರುವ ಪಂಚರತ್ನ ಯೋಜನೆ ರಥಯಾತ್ರೆ ಯಶಸ್ವಿಯಾಗಿ ಮೊದಲ ಹಂತದಲ್ಲಿ 6 ಜಿಲ್ಲೆಗಳನ್ನು ಮುಗಿಸಿದೆ.

ಇದನ್ನೂ ಓದಿ :ತುರುವೇಕೆರೆಯಲ್ಲಿ ಪಂಚರತ್ನ ರಥ ಯಾತ್ರೆ: ಡ್ರ್ಯಾಗನ್​ ಫ್ರೂಟ್ ಹಾರ ಹಾಕಿ ಕುಮಾರಸ್ವಾಮಿಗೆ ಅದ್ಧೂರಿ ಸ್ವಾಗತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.