ETV Bharat / state

ರಾಯಚೂರಿನಲ್ಲಿ ಗಾಂಜಾ ಚಾಕೊಲೇಟ್ ಪತ್ತೆ​: ಬಂಧಿತರ ಸಂಖ್ಯೆ 5ಕ್ಕೆ ಏರಿಕೆ

ರಾಯಚೂರಿನಲ್ಲಿ ಗಾಂಜಾ ಮಿಶ್ರಿತ ಚಾಕೊಲೇಟ್​ ಪತ್ತೆ ಹಿನ್ನೆಲೆಯಲ್ಲಿ ಇದುವರೆಗೂ 5 ಆರೋಪಿಗಳನ್ನು ಬಂಧಿಸಲಾಗಿದೆ.

ಗಾಂಜಾ ಚಾಕೊಲೇಟ್ ಪ್ರಕರಣ
ಆರೋಪಿಯೊಂದಿಗೆ ಜಿಲ್ಲಾಧಿಕಾರಿ ಸೇರಿದಂತೆ ಅಬಕಾರಿ ಇಲಾಖೆ
author img

By

Published : Aug 3, 2023, 1:29 PM IST

Updated : Aug 3, 2023, 1:55 PM IST

ಪ್ರಕರಣ ಕುರಿತು ಉಪ ಆಯುಕ್ತೆ ಲಕ್ಷ್ಮಿ ನಾಯಕ ಹೇಳಿಕೆ

ರಾಯಚೂರು: ಜಿಲ್ಲೆಯಲ್ಲಿ ಗಾಂಜಾ ಮಿಶ್ರಿತ ಚಾಕೊಲೇಟ್​ ಪತ್ತೆ ಹಿನ್ನೆಲೆಯಲ್ಲಿ ಅಬಕಾರಿ ಪೊಲೀಸರಿಂದ ಮತ್ತಷ್ಟು ಶೋಧ ಕಾರ್ಯ ನಡೆದಿದ್ದು, ಮೂವರು ಆರೋಪಿಗಳನ್ನು ಅರೆಸ್ಟ್​ ಮಾಡಿ ಚಾಕೊಲೇಟ್ ಜಪ್ತಿ ಮಾಡಿಕೊಳ್ಳಲಾಗಿದೆ. ರಾಯಚೂರು ನಗರ, ಇಂಡಸ್ಟ್ರಿಯಲ್ ಏರಿಯಾ, ಯರಮರಸ್, ಚಿಕ್ಕಸೂಗೂರು, ಯರಗೇರಾ ಸೇರಿದಂತೆ ಕಡೆಗಳಲ್ಲಿ ದಾಳಿ ನಡೆಸಿ ಇದರ ಕಿಂಗ್‌ಪಿನ್​ ಸೇರಿದಂತೆ ಬುಧವಾರದಂದು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದಕ್ಕೂ ಹಿಂದೆ ಇಬ್ಬರನ್ನು ಅರೆಸ್ಟ್​ ಮಾಡಲಾಗಿತ್ತು.

ಕಿರಾಣಿ ಅಂಗಡಿ ಮತ್ತು ಹೋಟೆಲ್​ಗಳ ಮೇಲೆ ದಾಳಿ ನಡೆಸಿದ್ದು, ಗಾಂಜಾ ಚಾಕೊಲೇಟ್ ಬಾಕ್ಸ್ ಪತ್ತೆಯಾಗಿದೆ. ಇದರ ಕಿಂಗ್‌ಪಿನ್ ಸಂದೀಪ್ ಹಾಗೂ ಇನ್ನಿಬ್ಬರನ್ನು ಅಬಕಾರಿ ಪೊಲೀಸರು ಬಂಧಿಸಿದ್ದು, ಗಾಂಜಾ ಮಿಶ್ರಿತ ಚಾಕೊಲೇಟ್ ಜಪ್ತಿ ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ. 30, 40, 50, 60 ರೂಪಾಯಿವರೆಗೆ ಚಾಕೊಲೇಟ್ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದ್ದು, ಇದರ ಜಾಡು ಹಿಡಿದು ಅಬಕಾರಿ ದಾಳಿಯನ್ನು ಮುಂದುವರೆಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಬಕಾರಿ ಇಲಾಖೆ ಜಿಲ್ಲಾಧಿಕಾರಿ ಲಕ್ಷ್ಮೀ ನಾಯಕ, ಈ ಪ್ರಕರಣ ಸಂಬಂಧಿಸಿದಂತೆ ಮೊದಲಿಗೆ ಇಬ್ಬರು ಹಾಗೂ ಬುಧುವಾರದಂದು ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಕಿಂಗ್‌ಪಿನ್ ಸಂದೀಪ್ ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿದೆ. ಅವರಲ್ಲಿದ್ದ ಚಾಕೊಲೇಟ್ ಜಪ್ತಿ ಮಾಡಿಕೊಂಡಿದ್ದೇವೆ. ಆರಂಭದಲ್ಲಿ ಬಂಧಿತರಿಂದ ವಿಚಾರಣೆ ನಡೆಸಿದ ವೇಳೆ ನೀಡಿದ ಮಾಹಿತಿಯನ್ನು ಆಧರಿಸಿ ಮಾಡಿದ ದಾಳಿ ನಿಜವಾಗಿದೆ.

ಕಿಂಗ್‌ಪಿನ್ ವಿಚಾರಿಸಿ, ಈ ಚಾಕೊಲೇಟ್​ಗಳು ಎಲ್ಲಿಂದ ಸಪ್ಲೈ ಮಾಡಲಾಗುತ್ತಿದೆ, ಇನ್ನೂ ಯಾವ ಕಡೆ ಮಾರಾಟವಾಗುತ್ತಿದೆ ಎನ್ನುವುದು ಮಾಹಿತಿ ಕಲೆ ಹಾಕಿ ಶೋಧ ಕಾರ್ಯ ನಡೆಸಲಾಗುವುದು. ಈಗ ಬಂಧಿತರು ಮಾಧ್ಯಮದ ವರ್ಗದವರು ಆಗಿದ್ದಾರೆ. ಗಾಂಜಾ ಮಿಶ್ರಿತ ಚಾಕೊಲೇಟ್​ನ್ನು 40, 50, 60 ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದರು, ಬುಧವಾರ ನಾಲ್ಕೈದು ಕಡೆ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಮಂಗಳವಾರ, ಉತ್ತರ ಪ್ರದೇಶದಲ್ಲಿ ತಯಾರಿಸಿದ ಈ ಗಾಂಜಾ ಲೇಪಿತ ಚಾಕೊಲೇಟ್​ಗಳನ್ನು ರಾಯಚೂರಿಗೆ ತಂದು ಎಲ್.ಬಿ.ಎಸ್ ನಗರ ಮತ್ತು ಇಂಡಸ್ಟ್ರಿಯಲ್ ಏರಿಯಾದಲ್ಲಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಕಳೆದ ಹಲವು ದಿನಗಳಿಂದ ರಾಜಾರೋಷವಾಗಿ ಈ ದಂಧೆ ನಡೆಯುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದರು. ಅಲ್ಲದೆ ಇದೇ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿದಾಗ, ಶ್ರೀಪಾನಾ ಮುನಾಕಾ ಹಾಗೂ ಶ್ರೀ ಆನಂದ ಮುನಾಕಾ ಎನ್ನುವ ಹೆಸರಿನಲ್ಲಿದ್ದ 482 ಗಾಂಜಾ ಲೇಪಿತ ಚಾಕೊಲೇಟ್​​ಗಳನ್ನು ಜಪ್ತಿ ಮಾಡಿದ್ದರು.

ಬಂಧಿತ ಆರೋಪಿಗಳ ವಿಚಾರಣೆ ನಡೆಸಿದಾಗ, ಇದರ ಕಿಂಗ್ ಪಿನ್ ಬಗ್ಗೆ ಮಾಹಿತಿ ಕಲೆಹಾಕಲಾಗುವುದು. ಈ ಬಗ್ಗೆ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ' ಎಂದು ಅಬಕಾರಿ ನಿರೀಕ್ಷಕ ಹನುಮಂತ ಗುತ್ತೆದಾರ ಮಾಹಿತಿ ನೀಡಿದ್ದರು. ತನಿಖೆ ಚುರುಕುಗೊಳಿಸಿದ್ದ ಪೊಲೀಸರು ನಿನ್ನೆಯೇ ಕಿಂಗ್​ಪಿನ್​ನ್ನು ಕೂಡ ಬಂಧಿಸಿದ್ದಾರೆ.

ಇದನ್ನೂ ಓದಿ: ಗಾಂಜಾ ಲೇಪಿತ ಚಾಕೊಲೇಟ್ ಮಾರಾಟ: ಇಬ್ಬರು ಆರೋಪಿಗಳ ಬಂಧನ

Last Updated : Aug 3, 2023, 1:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.