ರಾಯಚೂರು: ತರಕಾರಿ ಮಾರಾಟಗಾರರೋರ್ವರ ನಾಲ್ಕು ವರ್ಷದ ಹೆಣ್ಣು ಮಗು ಕ್ಯಾನ್ಸರ್ನಿಂದ ಬಳಲುತ್ತಿದ್ದು, ಶಸ್ತ್ರ ಚಿಕಿತ್ಸೆಗಾಗಿ ಸುಮಾರು 29 ಲಕ್ಷ ಅವಶ್ಯಕತೆ ಇದೆ. ಹಾಗಾಗಿ ಆರ್ಥಿಕ ಸಹಾಯಧನ ನೀಡಲು ದಾನಿಗಳು ಮುಂದಾಗುವಂತೆ ಮಗುವಿನ ಸಂಬಂಧಿ ಹನುಮೇಶ ಮನವಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ವೀರೇಶ ಅವರ ನಾಲ್ಕು ವರ್ಷದ ಮಗಳು ಮಾನ್ಯ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಚಿಕಿತ್ಸೆಗಾಗಿ ಸುಮಾರು 29 ಲಕ್ಷ ರೂಪಾಯಿ ಖರ್ಚು ಆಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಿಲಾಪ್ ಸಂಸ್ಥೆ 9 ಲಕ್ಷ ರೂ ಸಹಾಯಕ್ಕೆ ಮುಂದಾಗಿದ್ದು, ಉಳಿದ 20 ಲಕ್ಷ ರೂ. ಹೊಂದಿಸಬೇಕಾಗಿದ್ದು, ಕುಟುಂಬ ಆರ್ಥಿಕವಾಗಿ ಸದೃಢವಿಲ್ಲದ ಕಾರಣ, ಮಗುವಿನ ಮುಂದಿನ ಚಿಕಿತ್ಸೆಗೆ ಹಿನ್ನಡೆಯಾಗುತ್ತಿದೆ. ದಾನಿಗಳಿಂದ ಆರ್ಥಿಕ ಸಹಾಯ ನಿರೀಕ್ಷೆಯಲ್ಲಿ ಇದ್ದು, ಮಗುವಿನ ಉಳಿವಿಗಾಗಿ ದಾನಿಗಳು ಆರ್ಥಿಕ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ಮಾನ್ಯಾಳ ತಂದೆಯ ಬ್ಯಾಂಕ್ ಖಾತೆಯ ವಿವರ RBL ಬ್ಯಾಂಕ್ ಖಾತೆ ಸಂಖ್ಯೆ 2223330056145035IFSC no RATNOVAAPIS ದೇಣಿಗೆ ನೀಡಲು ಕೋರಿದರು.