ಲಿಂಗಸುಗೂರು: ಅಂಕಲಿಮಠದ ಪೀಠಾಧಿಪತಿ ವೀರಭದ್ರಸ್ವಾಮಿಗಳ ಪುತ್ರ ಬಸವರಾಜ ಸ್ವಾಮಿ ಅವರ ವಿವಾಹದ ಹಿನ್ನೆಲೆಯಲ್ಲಿ ಮಠವು ಅರಮನೆಯಂತೆ ಕಂಗೊಳಿಸಿದೆ.
ಐತಿಹಾಸಿಕ ಶಿರಸಬಂದನಪುರ (ರಾಕ್ಷಸರು ವಾಸಿಸುತ್ತಿದ್ದ ಸ್ಥಳ) ಭಾವೈಕ್ಯತೆ ತಾಣವಾಗಿ ಹೆಮ್ಮರವಾಗಿ ಬೆಳೆದು ನಿಂತಿರುವ ಅಂಕಲಿಮಠ (ತಲೆಕಟ್ಟು) ವೈವಿಧ್ಯಮಯ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿರುವ ಚಿತ್ರಣ ನೋಡುಗರ ಕಣ್ಮನ ಸೆಳೆದಿದೆ.
ಬಸವರಾಜ ಸ್ವಾಮಿ ಅವರು ಶಿವಾನಿ ಜೊತೆ ಇಂದು ಸಪ್ತಪದಿ ತುಳಿಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಮದುವೆಗೆ ಅಂಕಲಿಮಠದ ಆವರಣ ಮಧುವಣಗಿತ್ತಿಯಂತೆ ಸಿಂಗಾರಗೊಳಿಸಲಾಗಿತ್ತು. ಮೈಸೂರು ಅರಮನೆ ಮಾದರಿಯಲ್ಲಿ ವಿವಾಹ ವೇದಿಕೆಯನ್ನು ಸಜ್ಜುಗೊಳಿಸಲಾಗಿತ್ತು.