ರಾಯಚೂರು: ಹೃದಯಾಘಾತದಿಂದ ನಿಧನ ಹೊಂದಿದ್ದ ರಾಯಚೂರಿನ ವ್ಯಾಪಾರಿಯೊಬ್ಬರು ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ನಗರದ ಜವಳಿ ವರ್ತಕ ಅಮರಣ್ಣ ದೋತರಬಂಡಿ ಎಂಬುವರು ನಿನ್ನೆ ಸಂಜೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಬಳಿಕ ದೇಹಾಂಗದಾನ ಮಾಡುವುದಾಗಿ ಹೇಳಿದ್ದು, ಅವರ ಇಚ್ಛಾನುಸಾರವಾಗಿ ಕುಟುಂಬಸ್ಥರು ರಿಮ್ಸ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಮೃತ ದೇಹವನ್ನು ದಾನ ಮಾಡಿದ್ದಾರೆ.
ಮೃತಪಟ್ಟ ಬಳಿಕ ಮನುಷ್ಯನ ದೇಹವನ್ನು ಮಣ್ಣಿನಲ್ಲಿ ಹೂಳುವುದು ಇಲ್ಲವೇ ದಹನ ಮಾಡುವ ಮೂಲಕ ಶವ ಸಂಸ್ಕಾರ ನೆರವೇರಿಸಲಾಗುತ್ತದೆ. ಇದರಿಂದ ದೇಹಾಂಗಗಳು ಮಣ್ಣು ಪಾಲಾಗುತ್ತವೆ. ಆದರೆ, ಸಾವಿನ ಬಳಿಕ ತಮ್ಮ ದೇಹದ ದಾನಗಳನ್ನು ದಾನ ಮಾಡುವ ಮೂಲಕ ಇನ್ನೊಬ್ಬರಿಗೆ ಉಪಯೋಗವಾಗುತ್ತದೆ. ಈ ಮೂಲಕ ಅಮರಣ್ಣ ದೋತರಬಂಡ ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರದಿರುವ ಜೊತೆಗೆ ಇತರರಿಗೂ ಮಾದರಿಯಾಗಿದ್ದಾರೆ.