ರಾಯಚೂರು: ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವ ಪ್ರಭಾರಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ತಹಸೀಲ್ದಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಖಿಲ ಕರ್ನಾಟಕ ಕುಳುವ ಮಹಾಸಂಘ ಒತ್ತಾಯಿಸಿದೆ.
ರಾಯಚೂರಿನ ಪ್ರತಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯ ಉಪಾಧ್ಯಕ್ಷ ಬಸವರಾಜ ಭಜಂತ್ರಿ, ಮಾನವಿ ತಾಲೂಕಿನ ಪೋತ್ನಾಳ ಗ್ರಾಮದ ಪ್ರಭಾರಿ ಗ್ರಾಮ ಲೆಕ್ಕಾಧಿಕಾರಿ ಚಿದಾನಂದ ಹಾಗೂ ಮಾನವಿ ತಹಶೀಲ್ದಾರ್ ಅಂಬರೇಶ ಬಿರಾದಾರ ಸೇರಿಕೊಂಡ ಪ್ರವರ್ಗ 1 ಜಾತಿಗೆ ಸೇರಿದವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಿದ್ದಾರೆ. ಈ ಮೂಲಕ ಕೊರವ ಸಮಾಜಕ್ಕೆ ಅನ್ಯಾಯವೆಸಗಿದ್ದಾರೆಂದು ಕಿಡಿ ಕಾರಿದರು.
ಗದಗನಿಂದ ಪೋತ್ನಾಳ ಗ್ರಾಮಕ್ಕೆ ಜೀವನೋಪಾಯಕ್ಕಾಗಿ ಬಂದು ನೆಲೆಸಿರುವ ಪರುಶರಾಮ ಎಂಬ ವ್ಯಕ್ತಿಯ ಪತ್ನಿ ಮಂಜಮ್ಮ ಹಂದಿಜೋಗಿಗೆ ಜಾತಿ ಪ್ರಮಾಣಪತ್ರ ನೀಡಿದ್ದಾರೆ. ಆದ್ರೆ ಇವರು ಪ್ರವರ್ಗ 1ಕ್ಕೆ ಸೇರಿದವರು ಆಗಿದ್ದಾರೆ. ಇದನ್ನ ಪರಿಶೀಲಿಸಿ ಪ್ರಮಾಣ ಪತ್ರ ನೀಡಬೇಕಾದ ಗ್ರಾಮ ಲೆಕ್ಕಾಧಿಕಾರಿ ಹಾಗೂ ತಹಶೀಲ್ದಾರ್ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವ ಮೂಲಕ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದ್ದು, ಈ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಒತ್ತಾಯಿಸಿದರು.