ರಾಯಚೂರು : ರಿಮ್ಸ್ ಆಸ್ಪತ್ರೆಯ ವಾಹನ ಚಾಲಕ ಬಂದೆಪ್ಪ ಅವರನ್ನು ಅಮಾನತುಗೊಳಿಸಿ ವೈದ್ಯಕೀಯ ಅಧೀಕ್ಷಕ ಆದೇಶಿಸಿದ್ದಾರೆ.
ಓಪೆಕ್ ಆಸ್ಪತ್ರೆಯ ಆವರಣದಲ್ಲಿ ಕೊರೊನಾ ಸೋಂಕಿತ ರೋಗಿಗಳಿಗೆ ನೀಡಬೇಕಾಗಿದ್ದ ರೆಮ್ಡಿಸಿವಿರ್ ಖಾಸಗಿಯವರಿಗೆ ಮಾರಾಟ ಮಾಡಲು ತಂದಿರುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ರೋಗಿಗಳ ಸಂಬಂಧಿಕರು ವಿಡಿಯೋ ಮಾಡಿದ್ರು.
ಮೇಲ್ನೋಟಕ್ಕೆ ರೆಮ್ಡಿಸಿವಿರ್ ಇಂಜೆಕ್ಷನ್ ದುರುಪಯೋಗ ಮಾಡಿಕೊಂಡಿರುವುದು ಪ್ರಾಥಮಿಕ ಹಂತದಲ್ಲಿ ಕಂಡು ಬಂದಿದೆ.
ಈ ಕುರಿತು ಇಲಾಖೆಯಲ್ಲಿ ವಿಚಾರಣೆ ನಡೆಯುತ್ತಿದ್ದು, ಮುಂದಿನ ಆದೇಶದವರೆಗೂ ಬಂದೆಪ್ಪ ಅವರನ್ನು ಅಮಾನತುಗೊಳಿಸಿ ಆದೇಶ ಮಾಡಲಾಗಿದೆ.
ಓದಿ: ಕುರಿಮಂದೆಯಂತೆ ಜನರನ್ನು ತುಂಬಿ ಹೊರಟಿದ್ದ ಚಾಲಕನಿಗೆ ಪೊಲೀಸರಿಂದ ಗೂಸಾ!