ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಕುರುಕುಂದಾ ಗ್ರಾಮದಲ್ಲಿ ನಿರ್ಮಿಸಿದ್ದ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ನಟ ಸುದೀಪ್ ಉದ್ಘಾಟಿಸಿದರು. ಇಲ್ಲಿನ ಹೆಲಿಪ್ಯಾಡ್ ಬಳಿ ನಿರ್ಮಿಸಿದ್ದ ವೇದಿಕೆಯಲ್ಲಿ ಸಾವಿರಾರು ಅಭಿಮಾನಿಗಳು ಸೇರಿದ್ದರು. ನೆರೆದ ಅಭಿಮಾನಿಗಳತ್ತ ಕೈಬೀಸಿದ ಸುದೀಪ್, ನಿಮ್ಮ ಅಭಿಮಾನವೇ ನಮಗೆ ಎಲ್ಲಕ್ಕಿಂತ ಮಿಗಿಲು ಎಂದರು. ಇದೇ ವೇಳೆ ಹಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು.
ವೇದಿಕೆಯ ಮೇಲೆ ಹೆಚ್ಚು ಸಮಯ ಇರದ ಸುದೀಪ್ ಅವರನ್ನು ಕಾಣಲು ಅಭಿಮಾನಿಗಳು ಹೆಲಿಪ್ಯಾಡ್ ಬಳಿ ನುಗ್ಗಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಗುಂಪು ಚದುರಿಸಲು ಲಾಠಿ ಬೀಸಬೇಕಾಯಿತು.
ಇದನ್ನೂ ಓದಿ: ಸುದೀಪ್ ಕಾರ್ಯಕ್ರಮದಲ್ಲಿ ಲೇಡಿ ಪಿಎಸ್ಐ ಜೊತೆ ಅನುಚಿತ ವರ್ತನೆ.. ಕಪಾಳ ಮೋಕ್ಷ ಮಾಡಿದ ಅಧಿಕಾರಿ!