ETV Bharat / state

ರಾಯಚೂರು: ಕೆಬಿಜೆಎನ್​​​ಎಲ್ ಎಇಇ ನಿವಾಸದ ಮೇಲೆ ಎಸಿಬಿ‌ ರೇಡ್..ಯಾದಗಿರಿಯ ಮನೆಯಲ್ಲೂ ಸರ್ಚ್​! - ಕೃಷ್ಣಾ ಭಾಗ್ಯ ಜಲ ನಿಗಮ ಲಿಮಿಟೆಡ್

ಕೃಷ್ಣಾ ಭಾಗ್ಯ ಜಲ ನಿಗಮ ಲಿಮಿಟೆಡ್​ನ ಎಇಇ ಅಶೋಕ್ ರೆಡ್ಡಿ ಪಾಟೀಲ್ ಎನ್, ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು‌ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ACB raid on KBJN L AEE house in Raichur
ಕೆಬಿಜೆಎನ್​​​ಎಲ್ ಎಇಇ ಮನೆ ಮೇಲೆ ಎಸಿಬಿ‌ ದಾಳಿ
author img

By

Published : Mar 16, 2022, 10:41 AM IST

ರಾಯಚೂರು: ಇಂದು ಬೆಳ್ಳಂಬೆಳ್ಳಗೆ ರಾಜ್ಯದ 18 ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿ ಸೇರಿದಂತೆ 75 ಕಡೆಗಳಲ್ಲಿ ಎಸಿಬಿ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ಮುಂದುವರಿಸಿದೆ.

ಕೆಬಿಜೆಎನ್​​​ಎಲ್ ಎಇಇ ಮನೆ ಮೇಲೆ ಎಸಿಬಿ‌ ದಾಳಿ

ಕೃಷ್ಣಾ ಭಾಗ್ಯ ಜಲ ನಿಗಮ ಲಿಮಿಟೆಡ್ (ಕೆಬಿಜೆಎನ್​ಎಲ್)ನ ಎಇಇ ಅಶೋಕ್ ರೆಡ್ಡಿ ಪಾಟೀಲ್.ಎನ್ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು‌ ದಾಳಿ ನಡೆಸಿದ್ದಾರೆ. ಬೆಳಗ್ಗೆ 7 ಗಂಟೆಗೆ ರಾಯಚೂರು ನಗರದ ಬಸವೇಶ್ವರ ಕಾಲೋನಿಯಲ್ಲಿರುವ ಮನೆ ಹಾಗೂ ದೇವದುರ್ಗ ತಾಲೂಕಿನ ಕಚೇರಿಯ ಮೇಲೆ ದಾಳಿ ನಡೆಸಿದ್ದು, ಸದ್ಯ ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಗುಂಡ್ಲುಪೇಟೆ ಅಬಕಾರಿ ಇನ್ಸ್​​​​​​​ಪೆಕ್ಟರ್​​​​​​​​​ಗೆ ಎಸಿಬಿ ಶಾಕ್: ಮನೆ, ಕಚೇರಿ ಸೇರಿ 6 ಕಡೆ ದಾಳಿ

ಇನ್ನೂ ಅಶೋಕ್ ರೆಡ್ಡಿ ಪಾಟೀಲ್ ಯಾದಗಿರಿ ಮೂಲದವರಾಗಿದ್ದು, ಯಾದಗಿರಿ ಜಿಲ್ಲೆಯ ಶಹಾಪುರ ಬಳಿಯ ಕದ್ರಾಪುರ ಗ್ರಾಮದ ಮನೆ ಮೇಲೂ‌ ದಾಳಿ ನಡೆಸಲಾಗಿದೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.