ರಾಯಚೂರು: ತಾಲೂಕಿನ ನಡುಗಡ್ಡೆಯಲ್ಲಿ ಸಿಲುಕಿದ್ದ ಓರ್ವ ವ್ಯಕ್ತಿಯನ್ನ ಎನ್ಡಿಆರ್ಎಫ್ ತಂಡ ರಕ್ಷಣೆ ಮಾಡಿದೆ.
![A man stuck in river, rescued](https://etvbharatimages.akamaized.net/etvbharat/prod-images/kn-rcr-06-resuce-vis1-7202440_05082019212115_0508f_1565020275_64.jpeg)
ರಾಮಗಡ್ಡಿಯಲ್ಲಿರುವ ದೇವಾಲಯಕ್ಕೆ ದೇವರಿಗೆ ಪೂಜೆ ಸಲ್ಲಿಸಲು ತೆರಳಿದ್ದ ಅಣ್ಣಾರಾವ್ ಕೃಷ್ಣ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಅಲ್ಲಿಯೇ ಸಿಲುಕಿಕೊಂಡಿದ್ದರು.
ಇದರ ಮಾಹಿತಿ ಪಡೆದುಕೊಂಡ ಎನ್ಡಿಆರ್ಎಫ್ನ ಕಮಾಂಡರ್ ಮಹೇಶ್ ಪಾರೀಕ್ ನೇತೃತ್ವದ ತಂಡ ಬೋಟ್ ಮೂಲಕ ನಡುಗಡ್ಡೆಗೆ ತೆರಳಿ ಅಣ್ಣಾರಾವ್ ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ.