ETV Bharat / state

ರಾಯಚೂರಿನ ಮನ್ಸಲಾಪೂರ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ.. ಆತಂಕದಲ್ಲಿ ಗ್ರಾಮಸ್ಥರು

author img

By

Published : Dec 12, 2019, 2:02 PM IST

ಮನ್ಸಲಾಪೂರ ಗ್ರಾಮದ ಕೆರೆಯಲ್ಲಿ ಬೃಹತ್ ಆಕಾರದ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.

ಮನ್ಸಲಾಪೂರ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ
ಮನ್ಸಲಾಪೂರ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ

ರಾಯಚೂರು: ತಾಲೂಕಿನ ಮನ್ಸಲಾಪೂರ ಗ್ರಾಮದ ಕೆರೆಯಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಗ್ರಾಮದ ನಾಗರಾಜ ಎಂಬ ಯುವಕ ಮೊಸಳೆಯನ್ನು ನೋಡಿದ್ದು, ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾನೆ.

ಮೊಸಳೆ ಕಂಡ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಮೊಸಳೆ ಇರುವುದನ್ನು ಖಚಿತ ಪಡಿಸಿದ್ದಾರೆ. ಗ್ರಾಮದಲ್ಲಿ ಇದೀಗ ಶ್ರೀ ಸಿದ್ಧಲಿಂಗೇಶ್ವರ ಜಾತ್ರೆ ಇರುವುದರಿಂದ ಜನರು ಕೆರೆಯ ಹತ್ತಿರದ ರಸ್ತೆಯ ಮೂಲಕವೇ ತೆರಳುತ್ತಾರೆ. ಈ ಹಿನ್ನೆಲೆ ಕೆರೆಯ ಸುತ್ತಮುತ್ತ ಜನರು ಸುಳಿಯದಂತೆ ಸೂಚನಾ ಫಲಕ ಹಾಕಲಾಗಿದ್ದು, ಜೊತೆಗೆ ಡಂಗೂರ ಸಾರಿ ಕೆರೆಯ ಹತ್ತಿರ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.

Intro:ಸ್ಲಗ್: ಮೊಸಳೆ ಪ್ರತ್ಯಕ್ಷ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೨-೧೨-೨೦೧೯
ಸ್ಥಳ: ರಾಯಚೂರು

ಆಂಕರ್: ರಾಯಚೂರು ತಾಲೂಕಿನ ಮನ್ಸಲಾಪೂರ ಗ್ರಾಮದ ಕೆರೆಯ ಮೊಸಳೆ ಪ್ರತ್ಯೇಕ ಕಂಡು ಬಂದಿದ್ದು, ಗ್ರಾಮಸ್ಥರನ್ನ ಭಯಭೀತಿ ಪಡೆಸಿದೆ. Body:ತಾಲೂಕಿನ ಮನ್ಸಲಾಪೂರ ಗ್ರಾಮದ ಕೆರೆಯಲ್ಲಿ ಕಲ್ಲಿನ ಗುಂಡಿನ ಮೇಲೆ ಬೃಹತ್ ಆಕಾರದ ಮೊಸಳೆ ಕಂಡು ಬಂದಿದೆ.  ಗ್ರಾಮದ ನಾಗರಾಜ ಎನ್ನುವ ಯುವಕ ಮೊಸಳೆ ನೋಡಿದ್ದು, ಪೋಟೋ‌ವನ್ನ ಸೆರೆ ಹಿಡಿದಿದ್ದನೆ. ಮೊಸಳೆ ಕಂಡ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಮಾಹಿತಿ ಆಧಾರದ ಮೇಲೆ ಸ್ಥಳಕ್ಕೆ ಧವಿಸಿ ಪರಿಶೀಲನೆ ಮಾಡಿದಾಗ ಮೊಸಳೆ ಇರುವುದು ಖಾತರಿ ಪಡಿಸಲಾಗಿದೆ. ಬಳಿಕ ಗ್ರಾ.ಪಂ.ಗೆ ಮಾಹಿತಿ ನೀಡಿ ಕೆರೆಯ ಸುತ್ತಮುತ್ತ ಜನರು ಸುಳಿಯದಂತೆ ಕೆರೆಯಲ್ಲಿ ಜನ-ಜಾನುವಾರುಗಳು ತೆರಳದಂತೆ ಸೂಚನೆ ಫಲಕ ಹಾಕಲು ಸೂಚಿಸಲಾಗಿದೆ. ಇನ್ನೂ ಮನ್ಸಲಾಪೂರ ಗ್ರಾಮದ ಆರಾಧ್ಯದೈವ ಶ್ರೀ ಸಿದ್ಧಲಿಂಗೇಶ್ವರ ಜಾತ್ರೆ ಇರುವುದರಿಂದ ಜನರು ಕೆರೆಯ ಹತ್ತಿರದ ರಸ್ತೆಯ ಮೂಲಕ ಬೆಟ್ಟದ ಮೇಲೆ ತೆರಳುತ್ತಾರೆ, ಎಂಬುದು ಕುರಿತು ಎಚ್ಚೆತ್ತುಕೊಂಡು ಮೊಸಳೆ ಇದೆ ಕೆರೆಯ ಹತ್ತಿರ ಯಾರೂ ಸುಳಿಯದಂತೆ ಕೆರೆಯ ಹತ್ತಿರ ನಾಮ ಫಲಕ ಹಾಕಿದ್ದಾರೆ. Conclusion:ಅಲ್ಲದೆ ಗ್ರಾಮಸ್ಥರಿಗೆ ಮಾಹಿತಿ ನೀಡಲು ಗ್ರಾಮದಲ್ಲಿ ಡಂಗೂರ ಸಾರಿ ಕರೆಯ ಹತ್ತಿರ ಹೋಗದಂತೆ  ಎಚ್ಚರಿಕೆ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.