ETV Bharat / state

ಎಮ್ಮೆ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಬಾಲಕ! - ರಾಯಚೂರು ಅಪರಾಧ,

ಎಮ್ಮೆಯ ಜೀವ ಉಳಿಸಲು ಹೋಗಿ ಬಾಲಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

boy died by electrical shock, boy died by electrical shock in Raichur, Raichur crime news, Raichur crime latest news, ವಿದ್ಯುತ್​ ಶಾಕ್​ ತಗುಲಿ ಬಾಲಕ ಸಾವು, ರಾಯಚೂರಿನಲ್ಲಿ ವಿದ್ಯುತ್​ ಶಾಕ್​ ತಗುಲಿ ಬಾಲಕ ಸಾವು, ರಾಯಚೂರು ಅಪರಾಧ, ರಾಯಚೂರು ಅಪರಾಧ ಸುದ್ದಿ,
ಸಂಗ್ರಹ ಚಿತ್ರ
author img

By

Published : Jul 3, 2020, 3:20 PM IST

ಲಿಂಗಸೂಗೂರು (ರಾಯಚೂರು): ಎಮ್ಮೆಯ ಜೀವ ಉಳಿಸಲು ಹೋಗಿ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ತಾಲೂಕಿನ ಆಶಿಹಾಳ ತಾಂಡದಲ್ಲಿ ಸಂಭವಿಸಿದೆ.

boy died by electrical shock, boy died by electrical shock in Raichur, Raichur crime news, Raichur crime latest news, ವಿದ್ಯುತ್​ ಶಾಕ್​ ತಗುಲಿ ಬಾಲಕ ಸಾವು, ರಾಯಚೂರಿನಲ್ಲಿ ವಿದ್ಯುತ್​ ಶಾಕ್​ ತಗುಲಿ ಬಾಲಕ ಸಾವು, ರಾಯಚೂರು ಅಪರಾಧ, ರಾಯಚೂರು ಅಪರಾಧ ಸುದ್ದಿ,
ಮೂಕ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಬಾಲಕ

ತಂದೆ ಮನೆಯಿಂದ ಹೊರಗಡೆ ಹೋಗಿದ್ದ ವೇಳೆ ಬಾಲಕ ಪ್ರಮೋದ್ ಕುಮಾರ್ (17) ಮನೆಯ ಬಳಿಯ‌ ವಿದ್ಯುತ್ ಟ್ರಾನ್ಸ್​ಫಾರ್ಮರ್‌ ಬಳಿ ಮೇಯುತ್ತಿದ್ದ ಎಮ್ಮೆಯನ್ನು ಬೇರೆಡೆ ಓಡಿಸಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.

ಎಮ್ಮೆ ಟ್ರಾನ್ಸ್​ಫಾರ್ಮರ್ ಕಡೆ ಹೋಗಿ ಜೀವ ಕಳೆದುಕೊಳ್ಳುತ್ತದೆ ಎಂದು ಬಾಲಕ ಪ್ರಮೋದ್ ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯನ್ನ ತೆಗೆದುಕೊಂಡು ಎಮ್ಮೆ ಓಡಿಸಲು ಮುಂದಾಗಿದ್ದ. ಬಾಲಕನ ಕೈಯಲ್ಲಿದ್ದ ಕಟ್ಟಿಗೆ ಟ್ರಾನ್ಸ್‌ಫಾರ್ಮರ್‌ಗೆ ತಗುಲಿದ್ದು, ವಿದ್ಯುತ್ ಶಾಕ್​ನಿಂದಾಗಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು‌ ಮುಟ್ಟಿದೆ.

ಈ ಘಟನೆ ಕುರಿತು ‌ಮುದಗಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.