ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಚಿ ಎಂಬ ಜೀಬ್ರಾ ಹೆಣ್ಣು ಮರಿಗೆ ಜನ್ಮ ನೀಡಿದೆ. ಡಿ.11ರಂದು ಪ್ರಾಚಿ ಜೀಬ್ರಾ ಮರಿಗೆ ಜನ್ಮ ನೀಡಿದ್ದು, ಮರಿ ಹಾಗೂ ತಾಯಿ ಪ್ರಾಚಿ ಆರೋಗ್ಯದಿಂದಿವೆ. ಈ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.
ಓದಿ: ರಮೇಶ್ ಕುಮಾರ್ ವಿವಾದಿತ ಹೇಳಿಕೆಗೆ ಡಿಕೆಶಿ ಖಂಡನೆ.. ಮಹಿಳಾ ಸಮುದಾಯಕ್ಕೆ ಕ್ಷಮೆ ಕೋರಿದ ಕೆಪಿಸಿಸಿ ಅಧ್ಯಕ್ಷ
ಪ್ರಾಚಿ ಮತ್ತು ರಿಷಿ ಜೀಬ್ರಾಗಳಿಗೆ ಈ ಮರಿಯು ಜನಿಸಿದ್ದು, ಮೈಸೂರು ಮೃಗಾಲಯದ ಇತಿಹಾಸದಲ್ಲಿ ಮೃಗಾಲಯದಲ್ಲಿಯೇ ಜನಿಸಿದ ಐದನೇ ಜೀಬ್ರಾ ಮರಿ ಇದಾಗಿದೆ. ಪ್ರಾಚಿಗೆ ಇದು ಎರಡನೇ ಮರಿ ಎಂದು ತಿಳಿದುಬಂದಿದೆ. ಪ್ರಸ್ತುತ 3 ಗಂಡು ಮತ್ತು 5 ಹೆಣ್ಣು ಜೀಬ್ರಾಗಳು ಮೈಸೂರು ಮೃಗಾಲಯದಲ್ಲಿವೆ.
ಈ ಹೊಸ ಮರಿಯು ಮೃಗಾಲಯಕ್ಕೆ ಸೇರಿರುವುದಕ್ಕೆ ಮೃಗಾಲಯ ಸಿಬ್ಬಂದಿ ಸಂತಸ ಪಟ್ಟಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಣಾಧಿಕಾರಿ ಅಜಿತ್ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.