ಮೈಸೂರು: ಜಿಲ್ಲೆಯ ಮೃಗಾಲಯದಲ್ಲಿ ಪ್ರಾಚಿ ಎಂಬ ಝೀಬ್ರಾ ಹೆಣ್ಣು ಮರಿಗೆ ಜನ್ಮ ನೀಡಿದೆ.
ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಚಿ ಹೆಸರಿನ ಝೀಬ್ರಾ ಒಂದು ಹೆಣ್ಣು ಮರಿಗೆ ಆ.16ರಂದು ಜನ್ಮ ನೀಡಿದೆ. ಪ್ರಾಚಿ ಮತ್ತು ರಿಷಿ ಝೀಬ್ರಾಗಳಿಗೆ ಜನ್ಮಿಸಿರುವ ಈ ಮರಿ ಸೇರಿದಂತೆ ಮೃಗಾಲಯದಲ್ಲಿ ಜನಿಸಿರುವ ಮೂರನೇ ಮರಿಯಾಗಿದೆ.
ಈ ಮರಿಯು ಸೇರಿದಂತೆ 3 ಗಂಡು ಮತ್ತು 4 ಹೆಣ್ಣು ಝೀಬ್ರಾಗಳು ಮೃಗಾಲಯದಲ್ಲಿದೆ ಎಂದು ಮೃಗಾಲಯದ ಕಾರ್ಯ ನಿರ್ವಹಕಾಧಿಕಾರಿ ಅಜಿತ್ ಕುಲಕರ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.