ETV Bharat / state

ನಾಳೆಯಿಂದ ಯುವ ದಸರ ಆರಂಭ: ಮೋಡಿ ಮಾಡಲು ಬರಲಿದ್ದಾರೆ ರಾನು‌ ಮಂಡಲ್

author img

By

Published : Sep 30, 2019, 8:58 PM IST

ನಾಡಹಬ್ಬ ದಸರಾದಲ್ಲಿ ಯುವ ದಸರಾ ಅತ್ಯಂತ ಪ್ರಖ್ಯಾತಿ ಹೊಂದಿದ್ದು, ನಾಳೆಯಿಂದ ಯುವ ದಸರಾ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್​ವುಡ್​, ಬಾಲಿವುಡ್​ ಸೇರಿದಂತೆ ಪ್ರಖ್ಯಾತ ಗಾಯಕರು, ಗಾಯಕಿಯರು, ಕಲಾವಿದರು ಭಾಗಿಯಾಗಲಿದ್ದು, ಯುವ ದಸರಾ ರಂಗೇರುವುದು ಖಚಿತ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

ಸುದ್ದಿಗೋಷ್ಠಿ ನಡೆಸಿದ ಯುವದಸರಾ ಉಪವಿಶೇಷಾಧಿಕಾರಿ

ಮೈಸೂರು: ದಸರಾ ಮಹೋತ್ಸವದಲ್ಲಿ ಹುಚ್ಚೆದ್ದು ಕುಣಿಯುವಂತೆ ಮಾಡುವ ಯುವ ದಸರಾಕ್ಕೆ ಅಕ್ಟೋಬರ್ 1 ರಂದು ಕ್ರೀಡಾತಾರೆ ಪಿ.ವಿ.ಸಿಂಧು ಚಾಲನೆ ನೀಡಲಿದ್ದು, ತೇರಿ ಮೇರಿ ಖ್ಯಾತಿಯ ಗಾಯಕಿ ರಾನುಮಂಡಲ್ ಗಾನಸುಧೆ ಹರಿಸಲಿದ್ದಾರೆ.

ಮಹಾರಾಜ ಕಾಲೇಜು ಮೈದಾನದಲ್ಲಿ ನಾಳೆಯಿಂದ ಅ.6ರವರೆಗೆ ನಡೆಯುವ ಯುವ ದಸರೆಯಲ್ಲಿ ಸ್ಯಾಂಡಲ್‌ವುಡ್, ಬಾಲಿವುಡ್‌ನ ಕಲಾವಿದರು, ಸಂಗೀತಗಾರರು ಜನರನ್ನು ಹುಚ್ಚೆಬ್ಬಿಸಲಿದ್ದಾರೆ.

  • ಮೊದಲ ದಿನ ಚಿತ್ರ ನಿರ್ದೇಶಕ ನಾಗಶೇಖರ್ ತಂಡದಿಂದ ‘ಕೇಳದೆ ನಿಮಗೀಗ’ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಬಾಲಿವುಡ್ ಗಾಯಕರಾದ ಗುರು ರಾಂಧವ ಅವರು ಸಂಗೀತ ರಸಮಂಜರಿ ನಡೆಸಿಕೊಡಲಿದ್ದಾರೆ. ಇದರೊಂದಿಗೆ ಯುವ ಸಂಭ್ರಮದಿಂದ ಆಯ್ಕೆಯಾದ ಕಾಲೇಜು ತಂಡಗಳು ನೃತ್ಯ ಪ್ರದರ್ಶಿಸಲಿವೆ.
  • ಅ.2ರಂದು ಬಾಲಿವುಡ್‌ನ ಗಾಯಕ ಮೋಹಿತ್ ಚೌಹಾಣ್ ಸಂಗೀತ ಕಾರ್ಯಯಕ್ರಮ ನೀಡಲಿದ್ದು, ಬಾಂಬೆ ತಂಡದಿಂದ ರಷ್ಯನ್ ಆಕ್ಟ್, ಕ್ವಿಕ್ ಏಂಜಲ್ಸ್ ಮತ್ತು ಬ್ಯಾಡ್ ಸಾಲ್ಸಾ ನೃತ್ಯ ಕಾರ್ಯಕ್ರಮ ನಡೆಯಲಿದೆ.
  • ಅ.3ರಂದು ಮನಾಲಿ ಠಾಕೂರ್ ಗಾಯನ ಪ್ರಮುಖ ಆಕರ್ಷಣೆಯಾಗಿದ್ದು, 2015ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ ‘ದಮ್ ಲಗಾಕೇ ಹೈಸಾ’ದಲ್ಲಿ ‘ಮೊ ಮೊ ಕೇ ದಾಗೇ’ ಗೀತೆ ಹಾಡಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಮೊನಾಲಿ ಠಾಕೂರ್ ಅವರು ತಮ್ಮ ಸುಮಧುರ ಕಂಠದಿಂದ ಯುವ ದಸರಾಗೆ ಕಿಚ್ಚು ಹಚ್ಚಲಿದ್ದಾರೆ. ಅದೇ ದಿನ ಸ್ಟಾರ್ ಸಿಂಗರ್ಸ್ ತಂಡದಿಂದ ಸಂಗೀತ ರಸಮಂಜರಿ ಹಾಗೂ ಮಂಗಳೂರಿನ ಬಾಯ್ಸ್ ರೆನ್ ತಂಡದಿಂದ ನೃತ್ಯ ಪ್ರದರ್ಶನ ನಡೆಯಲಿದೆ.

ಸ್ಯಾಂಡಲ್‌ವುಡ್ ನೈಟ್: ಅ.4ರಂದು ‘ನಡುವೆ ಅಂತರವಿರಲಿ’ ‘ಚಿತ್ರದ ಶಾಂಕುತ್ಲೆ ಸಿಕ್ಕಳು' ಗೀತೆ ಹಾಡಿ ಯುವ ಹೃದಯಕ್ಕೆ ಮೋಡಿ ಮಾಡಿದ್ದ ಯುವ ಗಾಯಕ ಸಂಚಿತ್ ಹೆಗ್ಡೆ ಯುವ ದಸರಾದಲ್ಲಿ ಧೂಳೆಬ್ಬಿಸಲಿದ್ದಾರೆ. ಅವರ ಜೊತೆ ಶೋಕಿಲಾಲ, ಟಾಪ್ ಟು ಬಾಟಂ ಗಾಂಚಾಲಿ ಆಲ್ಬಂ ಗೀತೆಗಳಿಂದ ಹೆಸರುವಾಸಿಯಾದ ಬಿಗ್‌ಬಾಸ್ ವಿನ್ನರ್ ಚಂದನ್ ಶೆಟ್ಟಿ, ಕೆಂಡಸಂಪಿಗೆ ಸಿನಿಮಾ ಖ್ಯಾತಿಯ ಮಾನ್ವಿತಾ ಹರೀಶ್ ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ.

  • ಅ.5ರಂದು ದರ್ಶನ್, ಸಾಧುಕೋಕಿಲ, ರಕ್ಷಿತ್ ಶೆಟ್ಟಿ, ಐಂದ್ರಿತಾ ರೈ, ಡಾಲಿ ದನಂಜಯ್, ಸೃಜನ್ ಲೋಕೇಶ್ ಮೊದಲಾದವರು ಸ್ಯಾಂಡಲ್‌ವುಡ್ ನೈಟ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
  • ಅ.6ರ ಕೊನೆಯ ದಿನ ಬಾಲಿವುಡ್ ಸಂಗೀತ ನಿರ್ದೇಶಕ ಪ್ರೀತಮ್ ಚಕ್ರವರ್ತಿ ಮೊದಲಾದವರು ಗಮನ ಸೆಳೆಯಲಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಯುವದಸರಾ ಉಪವಿಶೇಷಾಧಿಕಾರಿ ಸಿ.ಬಿ.ರಿಷ್ಯಂತ್, 15 ಸಾವಿರ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು, 32 ಸಿಸಿಟಿವಿಗಳನ್ನು ಹೆಚ್ಚುವರಿ ಭದ್ರತೆಗೆ ಅಳವಡಿಸಲಾಗಿರುತ್ತದೆ. 5.30ರಿಂದಲೇ ಕಡ್ಡಾಯವಾಗಿ ಕಾರ್ಯಕ್ರಮ ನಡೆಸಲಾಗುವುದು. ಪ್ರಾಥಮಿಕವಾಗಿ ಈಗಾಗಲೇ ಇಲಾಖೆಯಿಂದ 1.5ಕೋಟಿ ರೂ. ಹಣ ಬಿಡುಗಡೆ ಆಗಿದ್ದು, ಪ್ರಾಯೋಜಕತ್ವ ನೀಡುವವವರ ಹಣವನ್ನು ಆಧರಿಸಿ ಕಲಾವಿದರಿಗೆ ಗೌರವಧನ ನೀಡಲಾಗುವುದು ಎಂದರು.

Intro:ಯುವದಸರಾBody:ಯುವ ದಸರಾ ನಾಳೆಯಿಂದ ಆರಂಭ ಮೋಡಮಾಡಲು ಬರಲಿದ್ದಾರೆ ರಾನು‌ ಮಂಡಲ್
ಮೈಸೂರು: ದಸರಾ ಮಹೋತ್ಸವದಲ್ಲಿ ಹುಚ್ಚೆದು ಕುಣಿಯುವಂತ ಮಾಡುವ ಯುವದಸರಾಕ್ಕೆ ಅಕ್ಟೋಬರ್ 1 ರಂದು ಕ್ರೀಡಾತಾರೆ ಪಿ.ವಿ.ಸಿಂಧೂ ಉದ್ಘಾಟನೆಯೊಂದಿಗೆ ತೆರಿ ಮೇರಿ ಗಾಯಕಿ ರಾನುಮಂಡಲ್ ಗಾನಸುಧೆ ಹರಿಸಲಿದ್ದಾರೆ.

ಮಹಾರಾಜ ಕಾಲೇಜು ಮೈದಾನದಲ್ಲಿ ನಾಳೆಯಿಂದ ಅ.೬ರವರೆಗೆ ನಡೆಯುವ ಯುವ ದಸರೆಯಲ್ಲಿ ಸ್ಯಾಂಡಲ್‌ವುಡ್, ಬಾಲಿವುಡ್‌ನ ಕಲಾವಿದರು, ಸಂಗೀತಗಾರರು ಈ ಬಾರಿ ಜನಾಕರ್ಷಿಸಲಿದ್ದಾರೆ.
ಮೊದಲ ದಿನ ಚಿತ್ರ ನಿರ್ದೇಶಕ ನಾಗಶೇಖರ್ ತಂಡದಿಂದ ‘ಕೇಳದೆ ನಿಮಗೀಗ’ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಬಾಲಿವುಡ್ ಗಾಯಕರಾದ ಗುರು ರಾಂಧವ ಅವರು ಸಂಗೀತ ರಸಮಂಜರಿ ನಡೆಸಿಕೊಡಲಿದ್ದಾರೆ. ಇದರೊಟ್ಟಿಗೆ ಯುವ ಸಂಭ್ರಮದಿಂದ ಆಯ್ಕೆಯಾದ ಕಾಲೇಜು ತಂಡಗಳು ನೃತ್ಯ ಪ್ರದರ್ಶಿಸಲಿವೆ.
ಅ.೨ರಂದು ಬಾಲಿವುಡ್‌ನ ಗಾಯಕ ಮೋಹಿತ್ ಚೌಹಾಣ್ ಸಂಗೀತ ಕಾರ್ಯಯಕ್ರಮ ನೀಡಲಿದ್ದು, ಬಾಂಬೆ ತಂಡದಿಂದ ರಷ್ಯನ್ ಆಕ್ಟ್, ಕ್ವಿಕ್ ಏಂಜಲ್ಸ್ ಮತ್ತು ಬ್ಯಾಡ್ ಸಾಲ್ಸಾ ನೃತ್ಯ ಕಾರ್ಯಯಕ್ರಮ ನಡೆಯಲಿದೆ. ಅ.೩ರಂದು ಮನಾಲಿ ಠಾಕೂರ್ ಗಾಯನ ಪ್ರಮುಖ ಆಕರ್ಷಣೆಯಾಗಿದೆ. ೨೦೧೫ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ ‘ದಮ್ ಲಗಾಕೇ ಹೈಸಾ’ದಲ್ಲಿ ‘ಮೊ ಮೊ ಕೇ ದಾಗೇ’ ಗೀತೆ ಹಾಡಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಮೊನಾಲಿ ಠಾಕೂರ್ ಅವರು ತಮ್ಮ ಸುಮಧುರ ಕಂಠದಿಂದ ಯುವ ದಸರಾಗೆ ಕಿಚ್ಚು ಹಚ್ಚಲಿದ್ದಾರೆ. ಅದೇ ದಿನ ಸ್ಟಾರ್ ಸಿಂಗರ್ಸ್ ತಂಡದಿಂದ ಸಂಗೀತ ರಸಮಂಜರಿಯೂ ಹಾಗೂ ಮಂಗಳೂರಿನ ಬಾಯ್ಸ್ ರೆನ್ ತಂಡದಿಂದ ನೃತ್ಯ ಪ್ರದರ್ಶನ ನಡೆಯಲಿದೆ.
ಸ್ಯಾಂಡಲ್‌ವುಡ್ ನೈಟ್: ಅ.೪ರಂದು ‘ನಡುವೆ ಅಂತರವಿರಲಿ’ ‘ಚಿತ್ರದ ಶಾಂಕುತ್ಲೆ ಸಿಕ್ಕಳು, ಸುಮ್ನೆನ್ನೆ ನಕ್ಕಳು’ ಗೀತೆ ಹಾಡಿ ಯುವ ಹೃದಯಕ್ಕೆ ಮೋಡಿ ಮಾಡಿದ್ದ ಯುವ ಗಾಯಕ ಸಂಚಿತ್ ಹೆಗ್ಡೆ ಯುವ ದಸರಾದಲ್ಲಿ ಧೂಳೆಬ್ಬಿಸಲಿದ್ದಾರೆ. ಅವರಜೊತೆ ಶೋಕಿಲಾಲ, ಟಾಪ್ ಟು ಬಾಟಂ ಗಾಂಚಾಲಿ ಆಲ್ಬಂ ಗೀತೆಗಳಿಂದ ಹೆಸರುವಾಸಿಯಾದ ಬಿಗ್‌ಬಾಸ್ ವಿನ್ನರ್ ಚಂದನ್ ಶೆಟ್ಟಿ, ಕೆಂಡಸಂಪಿಗೆ ಸಿನಿಮಾ ಖ್ಯಾತಿಯ ಮಾನ್ವಿತ ಹರೀಶ್ ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ.
ಅ.೫ರಂದು ದಂದು ದರ್ಶನ್, ಸಾಧುಕೋಕಿಲ, ರಕ್ಷಿತ್ ಶೆಟ್ಟಿ, ಐದ್ರಿತಾ ರೈ, ಡಾಲಿ ದನಂಜಯ್, ಸೃಜನ್ ಲೋಕೇಶ್ ಮೊದಲಾದವರು ಸ್ಯಾಂಡಲ್‌ವುಡ್ ನೈಟ್ ಕಾರ್ಯಕ್ರಮ ನಡೆಸಿಕೊಡುವರು. ಅ.೬ರ ಕೊನೆ ದಿನ ಬಾಲಿವುಡ್ ಸಂಗೀತ ನಿರ್ದೇಶಕ ಪ್ರೀತಮ್ ಚಕ್ರವರ್ತಿ ಮೊದಲಾದವು ಗಮನ ಸೆಳೆಯಲಿವೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಯುವದಸರಾ ಉಪವಿಶೇಷಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ೧೫ ಸಾವಿರ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು, ೩೨ ಸಿಸಿಟಿವಿಗಳನ್ನು ಹೆಚ್ಚುವರಿ ಭದ್ರತೆಗೆ ಅಳವಡಿಸಲಾಗಿರುತ್ತದೆ. ೫.೩೦ರಿಂದಲೇ ಕಡ್ಡಾಯವಾಗಿ ಕಾರ್ಯಕ್ರಮ ನಡೆಸಲಾಗುವುದು. ಪ್ರಾಥಮಿಕವಾಗಿ ಈಗಾಗಲೇ ಇಲಾಖೆಯಿಂದ ೧.೫ಕೋಟಿ ರೂ. ಹಣ ಬಿಡುಗಡೆ ಆಗಿದ್ದು, ಪ್ರಾಯೋಜಕತ್ವ ನೀಡುವವವರ ಹಣವನ್ನು ಆಧರಿಸಿ ಕಲಾವಿದರಿಗೆ ಗೌರವಧನ ನೀಡಲಾಗುವುದು ಎಂದರು.Conclusion:ಯುವದಸರಾ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.