ETV Bharat / state

ರಸ್ತೆಗಿಳಿದಿದ್ದನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಯುವತಿ - rules violation

ನಿಯಮ ಉಲ್ಲಂಘಿಸಿ ಸಂಚಾರ ನಡೆಸಿದ್ದನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ಯುವತಿಯೊಬ್ಬಳು ವಾಗ್ವಾದ ನಡೆಸಿದ ಘಟನೆ ಮೈಸೂರಿನಲ್ಲಿ ನಡೆಯಿತು

Young woman Violated Lockdown Rules in Mysuru
ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಯುವತಿ
author img

By

Published : Jun 8, 2021, 2:38 PM IST

Updated : Jun 8, 2021, 3:15 PM IST

ಮೈಸೂರು : ಲಾಕ್​ ಡೌನ್​ ವೇಳೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಬಗ್ಗೆ ಪ್ರಶ್ನಿಸಿದಕ್ಕೆ ಯುವತಿಯೊಬ್ಬಳು ಪೊಲೀಸರೊಡನೆ ವಾಗ್ವಾದ ನಡೆಸಿದ ಘಟನೆ ವಿ.ವಿ ಪುರಂ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯಿತು.

ನಗರದ ವಾಲ್ಮೀಕಿ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಬೈಕ್​ನಲ್ಲಿ ಯುವತಿಯೊಬ್ಬಳು ತಿರುಗಾಡುತ್ತಿದ್ದಳು. ಈ ಬಗ್ಗೆ ಪೊಲೀಸರು ಪ್ರಶ್ನಿಸಿದಕ್ಕೆ ರಂಪಾಟ ಶುರು ಮಾಡಿದ್ದಾಳೆ.

ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಯುವತಿ

ಮಹಿಳಾ ಪೊಲೀಸರು ಎಷ್ಟೇ ಶಾಂತವಾಗಿ ವರ್ತಿಸಿದರೂ ಯುವತಿ ಮಾತ್ರ ಏರು ಧ್ವನಿಯಲ್ಲಿ ಮಾತನಾಡುತ್ತಾ ರಂಪಾಟ ಮಾಡಿದ್ದಳು. ಪೊಲೀಸರ ಎದುರೇ ಬೈಕ್​ನಲ್ಲಿ ಎಸ್ಕೇಪ್ ಆಗಲು ಯತ್ನಿಸಿದ್ದಳು. ಯುವತಿಯ ಕಿರುಚಾಟಕ್ಕೆ ಬಗ್ಗದ ಪೊಲೀಸರು ದಂಡ ಕಟ್ಟಿಸಿ ಬಿಟ್ಟಿದ್ದಾರೆ.

ಓದಿ : ಮೀನುಗಾರರ ಸಮಸ್ಯೆ ಆಲಿಸದ ಸಚಿವರು: ಮನವಿ ಪತ್ರ, ಹೂಗುಚ್ಚ ಸಮುದ್ರಕ್ಕೆಸೆದು ಆಕ್ರೋಶ

Last Updated : Jun 8, 2021, 3:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.