ETV Bharat / state

ದೇಣಿಗೆ ನೀಡಲ್ಲವೆಂದ ಸಿದ್ದರಾಮಯ್ಯ ಹಿಂದೂ ವಿರೋಧಿಯಲ್ಲ; ಯತೀಂದ್ರ - ನಿಧಿ ಸಂಗ್ರಹ

ದೇಣಿಗೆ ಎಂಬುದು ಸ್ವ-ಇಚ್ಛೆಯಿಂದ ನೀಡುವುದು. ರಾಮಮಂದಿರಕ್ಕೆ ದೇಣಿಗೆ ನೀಡಲ್ಲ ಎಂದಿದ್ದಕ್ಕೆ ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

Yetindra siddramaiah
ಯತೀಂದ್ರ ಸಿದ್ದರಾಮಯ್ಯ
author img

By

Published : Feb 18, 2021, 7:58 PM IST

ಮೈಸೂರು: ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡುವುದು ಬಿಡುವುದು ಅವರಿಷ್ಟ, ಅದನ್ನು ಕೇಳಲು ಇವರ್ಯಾರು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಬಿಜೆಪಿಗೆ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ರಾಮಮಂದಿರಕ್ಕೆ ದೇಣಿಗೆ ನೀಡಲ್ಲ ಎಂಬ ಹೇಳಿಕೆ ವಿಚಾರವಾಗಿ ತಿ.ನರಸೀಪುರ ತಾಲೂಕಿನಲ್ಲಿ ಪ್ರತಿಕ್ರಿಯಿಸಿದ ಅವರು, ದೇಣಿಗೆ ಎಂಬುದು ಸ್ವ ಇಚ್ಛೆಯಿಂದ ನೀಡುವುದು. ರಾಮಮಂದಿರಕ್ಕೆ ದೇಣಿಗೆ ನೀಡಲ್ಲ ಎಂದಿದ್ದಕ್ಕೆ ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂದು ಹೇಳಲು ಸಾಧ್ಯವಿಲ್ಲ ಎಂದರು.

ದೇಣಿಗೆ ಕೊಡುವುದು ಬಿಡುವುದು ಅವರಿಷ್ಟ, ಅದನ್ನು ಕೇಳಲು ಇವರ್ಯಾರು: ಯತೀಂದ್ರ ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರು ನಾನು ಎಲ್ಲಾ ದೇವಸ್ಥಾನಗಳಿಗೆ ದೇಣಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ. ಅವರು ಅನೇಕ ದೇವಸ್ಥಾನಗಳಿಗೆ ವೈಯಕ್ತಿಕವಾಗಿ ದೇಣಿಗೆ ಕೊಟ್ಟಿದ್ದಾರೆ. ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ನಿರ್ಮಾಣಕ್ಕೆ ಯಾರು ದುಡ್ಡು ಕೊಟ್ಟಿದ್ದಾರೆ, ಕೊಟ್ಟಿಲ್ಲ ಎಂದು ಕೇಳುವುದು ಸರಿಯಲ್ಲ.

ಸಿದ್ದರಾಮಯ್ಯನವರಿಗೆ ಹಿಂದೂ ವಿರೋಧಿ ಹಣೆಪಟ್ಟಿ ಕಟ್ಟಲು ಯಾರಿಗೂ ಸಾಧ್ಯವಿಲ್ಲ. ನಾವು ಕೂಡ ನಿಜವಾದ ಹಿಂದೂಗಳೇ ಎಂದರು.

ಇದನ್ನೂ ಓದಿ: ಸಿಎಂ ಭಾವಚಿತ್ರಕ್ಕೆ ರೈತನಿಂದ ಅವಮಾನ: ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.